Advertisement
ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಯೋಜನೆ ಯಡಿ 20,843.03 ಕೋಟಿ ಹಾಗೂ ಟಿಎಸ್‌ಪಿ ಯೋಜನೆಯಡಿ 8,322.78 ಕೋಟಿ ರೂ. ಸೇರಿ ಒಟ್ಟು 29,165.81 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದರಲ್ಲಿ ಎಸ್‌ಸಿಎಸ್‌ಪಿ ಅಡಿ 13,483.79 ಕೋಟಿ ರೂ. ಬಿಡುಗಡೆಯಾಗಿದ್ದು, 10,783.47 ಕೋಟಿ ರೂ. ವೆಚ್ಚ ವಾಗಿದೆ. ಇದು ಹಂಚಿಕೆಯ ಶೇ.52ರಷ್ಟು ಮತ್ತು ಬಿಡುಗಡೆಯ ಶೇ.80ರಷ್ಟು ಆಗಿದೆ ಎಂದರು.
Related Articles
ಎಸ್ಸಿ, ಎಸ್ಟಿ ನಿರುದ್ಯೋಗಿಗಳು ಇ-ಕಾಮರ್ಸ್ ಅಡಿ ಆಹಾರ ಮತ್ತು ಇತರ ವಸ್ತುಗಳನ್ನು ಗ್ರಾಹಕರಿಗೆ ತಲುಪಿ ಸಲು ವಾಹನ ಸೌಲಭ್ಯಕ್ಕಾಗಿ ವಿದ್ಯುತ್, ಇತರ ದ್ವಿಚಕ್ರ ವಾಹನಗಳಿಗೆ ಗರಿಷ್ಠ 50 ಸಾ. ರೂ.ಸಹಾಯಧನ ಮತ್ತು 20 ಸಾ.ರೂ. ಸಾಲ ನೀಡ ಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ರಂತೆ ಒಟ್ಟು 22,400 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
Advertisement
ಬಾಕಿ ಪಾವತಿಗೆ ಕ್ರಮರಾಜ್ಯ ಅಕ್ಕಿ ಗಿರಣಿ ಮಾಲಕರಿಗೆ ಸರಕಾರದಿಂದ ಬಾಕಿ ಇರುವ 7 ಕೋಟಿ ರೂ. ಪಾವತಿ ವಿಷಯ ಕುರಿತು ಮೂರ್‍ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಕಾಸಸೌಧದಲ್ಲಿ ಶುಕ್ರವಾರ ಅಕ್ಕಿ ಗಿರಣಿ ಮಾಲಿಕರ ಸಂಘದ ವಿವಿಧ ಜಿಲ್ಲೆಗಳ ಅಧ್ಯಕ್ಷರ ಜತೆ ಪಡಿತರದಾರರಿಗೆ ಕುಚಲಕ್ಕಿ ವಿತರಣೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಅವರು ಈ ಭರವಸೆ ನೀಡಿದರು. 33 ಸಾವಿರ ಅರ್ಜಿಗಳು
2022-23ನೆ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗಾಗಿ 17 ಸಾವಿರ ಅರ್ಜಿಗಳು, ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ 15-16 ಸಾವಿರ ಅರ್ಜಿಗಳು ಬಂದಿವೆ. ಅವುಗಳನ್ನು ಶಾಸಕರ ಅಧ್ಯಕ್ಷತೆಯ ಸಮಿತಿಗಳಿಗೆ ಕಳು ಹಿಸಿಕೊಡಲಾಗಿದ್ದು, ಅವರು ಆಯ್ಕೆ ಮಾಡಿ ಕಳುಹಿಸಿದ ಬಳಿಕ ಕೊಳವೆ ಬಾವಿ ಕೊರೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 23 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್
2022-23ನೆ ಸಾಲಿನಿಂದ ಎಸ್ಸಿ, ಎಸ್ಟಿ ಬಿಪಿಎಲ್ ಕುಟುಂಬಗಳಿಗೆ 75 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಇದರಿಂದ ರಾಜ್ಯದ 23 ಲಕ್ಷ ಕುಟುಂಬಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ. ಎಸ್ಸಿ-ಎಸ್ಟಿ ಒಟ್ಟು ಜನಸಂಖ್ಯೆಯ ಶೇ.82ರಷ್ಟು ಮಂದಿಗೆ 75 ಯುನಿಟ್ ವಿದ್ಯುತ್ ಸೌಲಭ್ಯ ದೊರಕಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಭೇಟಿ ನೀಡಿರುವ 10 ಪ್ರಮುಖ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಲು ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ.
- ಕೋಟ ಶ್ರೀನಿವಾಸ ಪೂಜಾರಿ, ಸಚಿವರು