Advertisement

ಆಯುಷ್‌ ಚಿಕಿತ್ಸಾ ಪದ್ದತಿ ಅಳವಡಿಸಿಕೊಳ್ಳಿ: ಗದ್ದಿಗೌಡರ

04:30 PM Apr 28, 2020 | Suhan S |

ಬಾದಾಮಿ: ಮಾರಕ  ಕೋವಿಡ್ 19 ತಡೆಗಟ್ಟುವ ಸಲುವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ದಿನನಿತ್ಯ ಆಯುಷ್‌ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

Advertisement

ಸೋಮವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಜಿಲ್ಲಾ ಆಯುಷ್‌ ಇಲಾಖೆ, ಸರ್ಕಾರಿ ಆಯುಷ್ಯ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್‌-19 ಸಂದರ್ಭದಲ್ಲಿ ವೈದ್ಯರು, ಶುಶ್ರೂಕಿಯರು, ಪೊಲೀಸ್‌, ಪೌರಕಾರ್ಮಿಕರ ಸೇವೆ ಸ್ಮರಿಸಿ ಅವರ ಸೇವೆ ಶ್ಲಾಘಿಸಿದರು.

ತಹಶೀಲ್ದಾರ್‌ ಸುಹಾಸ ಇಂಗಳೆ ಮಾತನಾಡಿ, ಕೋವಿಡ್ 19  ತಡೆಗಟ್ಟಲು ಆಯುಷ್‌ ವೈದ್ಯರ ಸೇವೆ ಸ್ಮರಿಸಿದರು. ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಮಾತನಾಡಿ, ಕೊರೊನಾ ರೋಗ ತಡೆಗಟ್ಟಲು ಆಯುಷ್‌ ಪದ್ಧತಿ ಅನುಸರಿಸಬೇಕು ಎಂದು ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಎಂ.ಬಿ.ಪಾಟೀಲ ಮಾತನಾಡಿ, ಆಯುಷ್‌ ಪದ್ಧತಿಯಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮಲ್ಲಣ್ಣ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಪ್ರಕಾಶ ಬಣಕಾರ, ತಾಪಂ ಇಒ ಡಾ| ಪುನೀತ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸರಕಾರದ ವತಿಯಿಂದ ಹಡಪದ ಸಮಾಜದ 91 ಕುಟುಂಬಗಳಿಗೆ ಆಹಾರದ ಕಿಟ್‌ ಮತ್ತು ಪುರಸಭೆ ಪೌರಕಾರ್ಮಿಕರಿಗೆ ಸಾನಿಟೈಸರ್‌ ಕಿಟ್‌, ಮಾಸ್ಕ್ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next