Advertisement

Usain Bolt; ನನ್ನ ದಾಖಲೆಗಳಿಗೆ ಸದ್ಯ ಯಾವುದೇ ಗಂಡಾಂತರವಿಲ್ಲ

01:15 AM May 18, 2024 | Team Udayavani |

ಹೊಸದಿಲ್ಲಿ: ವಿಶ್ವದಾಖಲೆಯ ಓಟಗಾರ ಉಸೇನ್‌ ಬೋಲ್ಟ್ 8 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳುತ್ತಿದ್ದಾರೆ. ಅಂದಮಾತ್ರಕ್ಕೆ ಸಮಕಾಲೀನ ವೇಗಿಗಳು ಭಯಪಡುವ ಅಗತ್ಯವಿಲ್ಲ. ಬೋಲ್ಟ್ ಪ್ಯಾರಿಸ್‌ಗೆ ತೆರಳುತ್ತಿರುವುದು ಒಲಿಂಪಿಕ್ಸ್‌ ವೀಕ್ಷಿಸಲು!

Advertisement

ಐಸಿಸಿ ಟಿ20 ವಿಶ್ವಕಪ್‌ ರಾಯಭಾರಿಯೂ ಆಗಿರುವ ಬೋಲ್ಟ್, ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ. ಅಲ್ಲಿಂದ ಪಿಟಿಐಗೆ ದೂರವಾಣಿ ಮೂಲಕ ಸಂದರ್ಶನ ನೀಡಿದ್ದು, ಸದ್ಯ ನನ್ನ ದಾಖಲೆಗಳಿಗೆ ಯಾವುದೇ ಗಂಡಾಂತರ ಎದುರಾಗದು ಎಂದಿದ್ದಾರೆ.

“ನನ್ನ ವಿಶ್ವದಾಖಲೆಗೆ ಯಾವುದೇ ಭೀತಿ ಇದೆ ಎಂದು ಅನಿಸದು. ಸದ್ಯ ಯಾರಿಂದಲೂ ಇದನ್ನು ಮುರಿಯಲಾಗದು. ಇದಕ್ಕೆ ಇನ್ನೂ ಅನೇಕ ವರ್ಷ ಬೇಕಿದೆ’ ಎಂದು ನಗುತ್ತ ಹೇಳಿದರು.

2009ರ ಬರ್ಲಿನ್‌ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಓಟ (9.58 ಸೆಕೆಂಡ್ಸ್‌) ಹಾಗೂ 200 ಮೀ. ಓಟದಲ್ಲಿ (19.19 ಸೆಕೆಂಡ್ಸ್‌) ಬೋಲ್ಟ್ ನಿರ್ಮಿಸಿದ ವಿಶ್ವದಾಖಲೆ ಈಗಲೂ ಊರ್ಜಿತದಲ್ಲಿದೆ. 3 ಸತತ ಒಲಿಂಪಿಕ್ಸ್‌ ಕೂಟಗಳಲ್ಲಿ 100 ಮೀ. ಹಾಗೂ 200 ಮೀ. ಸ್ಪರ್ಧೆಗಳೆರಡರಲ್ಲೂ ಚಿನ್ನ ಗೆದ್ದ ವಿಶ್ವದ ಏಕೈಕ ಸ್ಪ್ರಿಂಟರ್‌ ಎಂಬ ಹೆಗ್ಗಳಿಕೆ ಕೂಡ ಬೋಲ್ಟ್ ಅವರದು.

Advertisement

Udayavani is now on Telegram. Click here to join our channel and stay updated with the latest news.

Next