ಜಮೈಕಾ: ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಗೆ ಕೋವಿಡ್ 19 ಸೋಂಕು ದೃಢವಾಗಿದೆ. ಸೋಮವಾರ ಸಂಜೆ ಸ್ವತಃ ಬೋಲ್ಟ್ ತನಗೆ ಕೋವಿಡ್ ಪಾಸಿಟಿವ್ ಆಗಿರುವ ಬಗ್ಗೆ ದೃಢಪಡಿಸಿದ್ದಾರೆ.
ಉಸೇನ್ ಬೋಲ್ಟ್ ಕಳೆದ ಶನಿವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರ ಬೋಲ್ಟ್ ಹುಟ್ಟಿದ ದಿನವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದರು. ಹಲವು ಸ್ನೇಹಿತರೊಂದಿಗೆ ಯಾವುದೇ ಸಾಮಾಜಿಕ ಅಂತರವಿಲ್ಲದೆ ಬೋಲ್ಟ್ ಪಾರ್ಟಿ ಮಾಡಿದ್ದರು. ಇದಾದ ಒಂದೇ ದಿನಕ್ಕೆ ಕೋವಿಡ್ ಪಾಸಿಟಿವ್ ಬಂದಿದ್ದು, ಹಲವರ ಆತಂಕಕ್ಕೆ ಕಾರಣವಾಗಿದೆ.
ಬೋಲ್ಟ್ ಗೆ ಕೋವಿಡ್ ಪಾಸಿಟಿವ್ ಆಗಿದ್ದರೂ ಯಾವುದೇ ಸೋಂಕು ಲಕ್ಷಣಗಳಿಲ್ಲ ಎನ್ನಲಾಗಿದೆ. ಹಾಗಾಗಿ ಅವರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಪಾಕ್ ಆಟ ಡ್ರಾನತ್ತ.. ಆ್ಯಂಡರ್ಸನ್ ಚಿತ್ತ 600ನೇ ವಿಕೆಟ್ ನತ್ತ!
ಕ್ರಿಸ್ ಗೇಲ್ ಗೆ ಆತಂಕ: ಜಮೈಕನ್ ಕ್ರಿಕೆಟರ್ ಕ್ರಿಸ್ ಗೇಲ್ ಕೂಡಾ ಬೋಲ್ಟ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈಗ ಬೋಲ್ಟ್ ಗೆ ಕೋವಿಡ್ ಪಾಸಿಟಿವ್ ಆಗಿರುವ ಕಾರಣ ಗೇಲ್ ಗೂ ಆತಂಕ ಆರಂಭವಾಗಿದೆ. ಮುಂಬರುವ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಗೇಲ್ ಕಣಕ್ಕಿಳಿಯಬೇಕಾಗಿದೆ.