Advertisement

ಜಮೈಕಾ: ಉಸೇನ್‌ ಬೋಲ್ಟ್ ಕಲ್ಲಿನ ಪ್ರತಿಮೆ ಅನಾವರಣ

07:00 AM Dec 05, 2017 | |

ಕಿಂಗ್‌ಸ್ಟನ್‌: ಒಲಿಂಪಿಕ್ಸ್‌ ಪದಕಗಳ ಸರದಾರ, ವಿಶ್ವ ಬಾಂಪಿಯನ್‌ ಜಮೈಕಾ ಆ್ಯತ್ಲೀಟ್‌ ಉಸೇನ್‌ ಬೋಲ್ಟ್ ಗೌರವಾರ್ಥ ಹುಟ್ಟೂರು ಜಮೈಕಾದಲ್ಲಿ ಅವರದೊಂದು ಸುಂದರವಾದ ಕಲ್ಲಿನ ಪ್ರತಿಮೆ ಕೆತ್ತಲಾಗಿದೆ.

Advertisement

ಜಮೈಕಾ ಪ್ರಧಾನಿ ಆ್ಯಂಡ್ರಿವ್‌ ಹಾಲ್‌ನೆಸ್‌ ಪ್ರತಿಮೆಯನ್ನು ರವಿವಾರ ಯದ್ಘಾಟಿಸಿದರು. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಉಸೇನ್‌ ಬೋಲ್ಟ್ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ತನಗೆ ಗೌರವ ನೀಡಿದ ಜಮೈಕಾ ಹಾಗೂ ಅಲ್ಲಿನ ಜನತೆಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲೇ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಯಿತು. ಶಿಲೆಯನ್ನು ಜಮೈಕಾದ ಖ್ಯಾತ ಶಿಲ್ಪಿ ಬಾಸಿಲ್‌ ವಾಟ್ಸನ್‌ ಕೆತ್ತಿದ್ದಾರೆ. ಉಸೇನ್‌ ಬೋಲ್ಟ್ 100 ಮೀ., 200 ಮೀ.ನಲ್ಲಿ ಸತತ 3 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ವೇಗದ ಓಟದ ವಿಭಾಗದಲ್ಲಿ ಇದೊಂದು ಐತಿಹಾಸಿಕ ದಾಖಲೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next