Advertisement

ಈ ವರ್ಷಾಂತ್ಯದ ವೇಳೆ ಅಮೆರಿಕಾದಲ್ಲಿ ಕೋವಿಡ್-19 ಲಸಿಕೆ ಸಿದ್ದ: ಡೊನಾಲ್ಡ್ ಟ್ರಂಪ್ ವಿಶ್ವಾಸ

08:25 AM May 05, 2020 | Mithun PG |

ವಾಷಿಂಗ್ಟನ್: ಈ ವರ್ಷದ ಅಂತ್ಯದ ವೇಳೆಗೆ ಅಮೆರಿಕಾದಲ್ಲಿ  ಕೋವಿಡ್ -19 ಲಸಿಕೆ ಸಿದ್ದವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಶದ ನುಡಿಗಳನ್ನಾಡಿದ್ದಾರೆ.

Advertisement

ಫಾಕ್ಸ್ ನ್ಯೂಸ್ ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ  ಅವರು  ಈ ವರ್ಷದ ಕೊನೆಯಲ್ಲಿ ಕೋವಿಡ್ 19 ನಿರ್ಮೂಲನಾ ಲಸಿಕೆಯನ್ನು ಪಡೆಯಲಿದ್ದೇವೆ. ಇದರಲ್ಲಿ  ನಮಗೆ ತುಂಬಾ ವಿಶ್ವಾಸವಿದೆ ಎಂದು ಟ್ರಂಪ್ ಹೇಳಿದರು.

ಸೆಪ್ಟೆಂಬರ್‌ನಲ್ಲಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪುನಃ ತೆರೆಯಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ  ಹಿಂತಿರುಗಬೇಕೆಂದು ನಾನು ಬಯಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಅಮೆರಿಕಾದ ಸಂಶೋಧಕರು ಈಗಾಗಲೇ ಲಸಿಕೆ  ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ಬೇರೆ ದೇಶದ ಸಂಶೋಧಕರು ಔಷಧಿ ಕಂಡುಹಿಡಿದರೆ  ನಮಗೂ ಸಂತೋಷವಾಗಲಿದ್ದು, ಅವರಿಗೆ ನನ್ನ ಟೋಪಿ (HAT) ತೆಗೆದು ಧನ್ಯವಾದ ತಿಳಿಸುತ್ತೇನೆ. . ಇಂತಹ ಸಂದರ್ಭದಲ್ಲಿ  ಲಸಿಕೆ ಕಂಡುಹಿಡಿಯುವುದೊಂದೆ ನಮ್ಮ ಧ್ಯೇಯ ಎಂದರು.

ಅಮೆರಿಕಾದಲ್ಲಿ ಈಗಾಗಲೇ  ಕೋವಿಡ್ 19 ವೈರಸ್ ಗೆ 68 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದು, 11 ಲಕ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next