Advertisement

US, UK Launch Strikes: ಯೆಮೆನ್‌ನಲ್ಲಿ ಹೌತಿ ನೆಲೆಗಳ ಮೇಲೆ ಬ್ರಿಟನ್, ಅಮೇರಿಕ ದಾಳಿ

08:49 AM Jan 12, 2024 | Team Udayavani |

ವಾಷಿಂಗ್ಟನ್: ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್ ಸೇನೆಗಳು ವೈಮಾನಿಕ ದಾಳಿ ನಡೆಸಿವೆ.

Advertisement

ಉಭಯ ದೇಶಗಳ ಸೇನೆಗಳು ಗುರುವಾರ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದೆ, ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪು ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಹಡಗು ಸಾರಿಗೆಯ ಮೇಲೆ ದಾಳಿ ನಡೆಸಿದ ಬಳಿಕ ಈ ದಾಳಿ ನಡೆದಿದ್ದು ಮುಂದಿನ ದಿನಗಳಲ್ಲಿ ಹಡಗು ಸಾರಿಗೆಯ ಮೇಲೆ ಹೌತಿ ಬಂಡುಕೋರರು ದಾಳಿ ಪುನರಾವರ್ತನೆಯಾದರೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಏತನ್ಮಧ್ಯೆ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು “ಕೆಂಪು ಸಮುದ್ರದಲ್ಲಿ ಅಂತರಾಷ್ಟ್ರೀಯ ಸರಕು ಹಡಗುಗಳ ಮೇಲೆ ದಾಳಿ ನಡೆಸಿರುವ ಹೌತಿ ಬಂಡುಕೋರರ ವಿರುದ್ಧ ದಾಳಿ ನಡೆಸಲು ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಶ್ನೆ ಇಲ್ಲ ದಾಳಿ ಮುಂದುವರೆದರೆ ಮುಂದಿನ ಕ್ರಮ ನಾವು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಈ ಉದ್ದೇಶಿತ ದಾಳಿಯು ಅಮೇರಿಕ ಮತ್ತು ನಮ್ಮ ಪಾಲುದಾರರು ಸೇರಿದಂತೆ ನಮ್ಮ ಸಿಬ್ಬಂದಿಯ ಮೇಲಿನ ದಾಳಿಯನ್ನು ಇಂದಿಗೂ ಸಹಿಸುವುದಿಲ್ಲ ಜೊತೆಗೆ ಸಮುದ್ರ ಸಾರಿಗೆಯ ವ್ಯವಸ್ಥೆಯನ್ನು ಹಾಳು ಮಾಡಲು ಬಿಡಲ್ಲ ಎಂದಿದ್ದಾರೆ. ಇದೇ ವೇಳೆ ವ್ಯಾಪಾರೀ ಹಡಗುಗಳಿಗೆ ಬೆದರಿಕೆ ಹಾಕುತಿದ್ದ ಹೌತಿ ಬಂಡುಕೋರರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.

ಈ ದಾಳಿಯ ನಂತರ, ಇರಾಕ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ದಾಳಿಯ ಸುದ್ದಿಯೂ ಮುನ್ನೆಲೆಗೆ ಬರುತ್ತಿದೆ.

Advertisement

ವೈಮಾನಿಕ ದಾಳಿಗೆ ಸಂಬಂಧಿಸಿದ ಕೆಲವು ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಇದರಲ್ಲಿ ದಾಳಿಯ ದೃಶ್ಯಗಳನ್ನು ಕಾಣಬಹುದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next