ವಾಷಿಂಗ್ಟನ್: ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಭಾರತದಿಂದ ಹೊರಡುವಂತೆ ತನ್ನ ದೇಶದ ಪ್ರಜೆಗಳಿಗೆ ಅಮೆರಿಕ ಸರಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸುದೀಪ್ ಆರೋಗ್ಯದಲ್ಲಿ ಚೇತರಿಕೆ : ವೈದ್ಯರಿಗೆ-ಅಭಿಮಾನಿಗಳಿಗೆ ಕಿಚ್ಚನ ಧನ್ಯವಾದ
ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಅಮೆರಿಕದ ಪ್ರಜೆಗಳು ಭಾರತಕ್ಕೆ ಪ್ರಯಾಣ ಕೈಗೊಳ್ಳದಂತೆ ಹಾಗೂ ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ವಾಪಸ್ ಬರಬೇಕೆಂದು ಅಮೆರಿಕ ಹೊರಡಿಸಿರುವ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.
ಭಾರತ ಮತ್ತು ಅಮೆರಿಕ ನಡುವೆ ದಿನಂಪ್ರತಿ 14 ವಿಮಾನ ಸಂಚರಿಸುತ್ತಿದೆ. ಅಲ್ಲದೇ ಭಾರತದಿಂದ ಅಮೆರಿಕಕ್ಕೆ ವಾಪಸ್ ಬರಲು ಇಚ್ಚಿಸುವ ಅಮೆರಿಕನ್ ಪ್ರಜೆಗಳು ಪ್ಯಾರಿಸ್, ಫ್ರಾಂಕ್ ಫರ್ಟ್ ವಿಮಾನ ಮಾರ್ಗ ಬಳಸಿಕೊಳ್ಳಬಹುದು ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ಕೋವಿಡ್ ಸೋಂಕು ತಡೆಗಟ್ಟಲು ಮತ್ತು ಸಾವಿನ ಪ್ರಮಾಣ ತಗ್ಗಿಸಲು ಭಾರತದ ಅಧಿಕಾರಿಗಳು ಮತ್ತು ಆಸ್ಪತ್ರೆಗಳು ಹರಸಾಹಸ ಪಡುತ್ತಿರುವುದಾಗಿ ಅಮೆರಿಕ ಹೇಳಿದೆ. ಭಾರತದಲ್ಲಿ ಬುಧವಾರ 3,60,960 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 3,293 ಮಂದಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.