ವಾಷಿಂಗ್ಟನ್ : ಪಾಕಿಸ್ಥಾನಕ್ಕೆ ತಾನು ನೀಡಲಿದ್ದ 1.15 ಶತಕೋಟಿ ಡಾಲರ್‌ಗಳಿಗೂ ಅಧಿಕ ಮೊತ್ತದ ಭದ್ರತಾ ನೆರವನ್ನು ಅಮೆರಿಕ ಅಮಾನತುಗೊಳಿಸಿದೆ.
ಇಸ್ಲಾಮಾಮಾದ್ ಈಗಲೂ ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ಜಾಲದ ಉಗ್ರರಿಗೆ ತನ್ನ ಗಡಿಯೊಳಗೆ ಆಶ್ರಯ, ನೆರವು ಪೋಷಣೆಯನ್ನು ನೀಡುತ್ತಿರುವುದರಿಂದ ತಾನು ಪಾಕಿಗೆ ನೀಡಲಿದ್ದ ಭದ್ರತಾ ನೆರವನ್ನು ಅಮಾನತುಗೊಳಿಸುತ್ತಿರುವುದಾಗಿ ಅಮೆರಿಕ ಹೇಳಿದೆ.
ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ಜಾಲದ ಉಗ್ರರನ್ನು ಮಟ್ಟ ಹಾಕಲು ಮತ್ತು ಅವರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಪಾಕ್ ಬಯಸುತ್ತಿಲ್ಲ ಎಂದು ಆರೋಪಿಸುವ ಮೂಲಕ ಅದಕ್ಕೆ ನೀಡುವ ಭದ್ರತಾ ನೆರವನ್ನು ತಾನು ಅಮಾನತುಗೊಳಿಸುತ್ತಿರುವುದಾಗಿ ಸ್ಪಷ್ಟ ಪಡಿಸಿದೆ.
ಪಾಕಿಸ್ಥಾನಕ್ಕೆ ಕಳೆದ ಹದಿನೈದು ವರ್ಷಗಳಿಂದಲೂ ಅಮೆರಿಕ ಬಿಲಿಯಗಟ್ಟಲೆ ಭದ್ರತಾ ನೆರವನ್ನುನೀಡುತ್ತಾ ಬಂದಿದೆ; ಆದರೆ ಇದಕ್ಕೆ ಪ್ರತಿಯಾಗಿ ಅದು ಅಮೆರಿಕಕ್ಕೆ ಕೇವಲ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆಯಲ್ಲದೆ ಡಬಲ್ ಗೇಮ್ ನಡೆಸುತ್ತಾ ಬಂದಿದೆ. ಉಗ್ರರನ್ನು ಮಟ್ಟಹಾಕಲು ಅಮೆರಿಕ ಪಾಕಿಸ್ಥಾನಕ್ಕೆ 33 ಬಿಲಿಯ ಡಾಲರ್‌ಗಳ ನೆರವನ್ನು ಕಳೆದ 15 ವರ್ಷಗಳಲ್ಲಿ ನೀಡಿದೆ.
ಆದರೆ ಅಮೆರಿಕದ ಅಪೇಕ್ಷೆಗೆ ವ್ಯತಿರಿಕ್ತವಾಗಿ ಅದು ಉಗ್ರರಿಗೆ ಆಸರೆ, ಪ್ರೋತ್ಸಾಹ, ನೆರವನ್ನು ನೀಡುತ್ತಾ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಹೊಸ ವರ್ಷದ ಟ್ವೀಟ್‌ನಲ್ಲಿ ಇಸ್ಲಾಮಾಬಾದ್‌ಗೆ ತಪರಾಕಿ ನೀಡಿದ್ದರು.