Advertisement

America ರಸ್ತೆ ಜಗಳ: ಭಾರತ ಮೂಲದ ನವವಿವಾಹಿತನ ಹತ್ಯೆ

01:13 AM Jul 22, 2024 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ನವವಿವಾಹಿತರೊಬ್ಬರನ್ನು ಅಮೆರಿಕದ ಇಂಡಿಯಾನಾ ನಗರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತರನ್ನು ಆಗ್ರಾ ಮೂಲದ ಗೌವಿನ್‌ ದಾಸೌರ್‌ (29) ಎಂದು ಗುರುತಿಸಲಾಗಿದೆ. ಇವರು ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಟ್ರಕ್‌ ಡ್ರೈವರ್‌ ಜತೆ ಚಿಕ್ಕದೊಂದು ಗಲಾಟೆ ನಡೆದಿದೆ. ಸಿಟ್ಟಿಗೆದ್ದ ಗೌವಿನ್‌ ತಮ್ಮ ಗನ್‌ ಹಿಡಿದು ಕಾರಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಕ್ರುದ್ಧನಾದ ಟ್ರಕ್‌ ಚಾಲಕ ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಗೌವಿನ್‌ರನ್ನು ಕೊಂದಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next