Advertisement

ಭಾರತೀಯ ಆಯ್ದ ಉತ್ಪನ್ನಗಳ ಮೇಲೆ ಶೇ.25ರ ವರೆಗೆ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾದ ಅಮೇರಿಕಾ

08:37 PM Mar 29, 2021 | Team Udayavani |

ನವದೆಹಲಿ: ದೇಶದ ಆಯ್ದ ಉತ್ಪನ್ನಗಳ ಮೇಲೆ ಅಮೆರಿಕ ಸರ್ಕಾರ ಶೇ.25ರ ವರೆಗೆ ತೆರಿಗೆ ವಿಧಿಸಲು ಮುಂದಾಗಿದೆ. ಬಾಸ್ಮತಿ ಅಕ್ಕಿ, ಚಿನ್ನ ಮತ್ತು ಬೆಳ್ಳಿಯ ಉತ್ಪನ್ನಗಳು ಸೀಗಡಿ, ಅಮೂಲ್ಯ ಶಿಲೆಗಳ ಮೇಲೆ ಈ ನಿಯಮ ಅನ್ವಯವಾಗಲಿದೆ.

Advertisement

ಕೇಂದ್ರ ಸರ್ಕಾರ ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸಿರುವ ಡಿಜಿಟಲ್‌ ಟ್ಯಾಕ್ಸ್‌ ಅಥವಾ ಗೂಗಲ್‌ ಟ್ಯಾಕ್ಸ್‌ ನಿಯಮದ ವಿರುದ್ಧವಾಗಿ ಬೈಡೆನ್‌ ಸರ್ಕಾರ ಈ ಕ್ರಮ ಕೈಗೊಂಡಿದೆ. ತನ್ನ ವಾಣಿಜ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೇ ಗೂಗಲ್‌ ಟ್ಯಾಕ್ಸ್‌ ಜಾರಿ ಮಾಡಲಾಗಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಮೇ ತಿಂಗಳಿನಿಂದ ಅನ್ವಯವಾಗುವಂತೆ ಶೇ.25ರ ವರೆಗಿನ ತೆರಿಗೆ ಪಾವತಿ ಜಾರಿಯಾಗಲಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್‌) ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಅಮೆರಿಕದ ಪ್ರಸ್ತಾಪದ ಬಗ್ಗೆ ಪರಿಶೀಲನೆ ನಡೆಸಿ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಮೆರಿಕದ ಕಂಪನಿಗಳು ಭಾರತ ಸರ್ಕಾರಕ್ಕೆ ನೀಡಬೇಕಾಗಿರುವ ಡಿಜಿಟಲ್‌ ಸೇವೆಗಳ ತೆರಿಗೆ ಮೌಲ್ಯವೇ ವಾರ್ಷಿಕವಾಗಿ 55 ಮಿಲಿಯ ಡಾಲರ್‌ ಆಗಿದೆ.

ಇದನ್ನೂ ಓದಿ :ಮಾ.31ರಂದು ಅಂಬಾಲಾಕ್ಕೆ ಬರಲಿವೆ 3 ರಫೇಲ್‌ ಯುದ್ಧ ವಿಮಾನ

Advertisement

Udayavani is now on Telegram. Click here to join our channel and stay updated with the latest news.

Next