Advertisement

ಅಮೆರಿಕ ಅಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ?

08:26 PM Feb 02, 2023 | Team Udayavani |

ವಾಷಿಂಗ್ಟನ್‌: ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ  ಭಾರತೀಯ ಮೂಲದ ಅಮೆರಿಕದ ರಾಜಕಾರಣಿ ನಿಕ್ಕಿ ಹ್ಯಾಲೆ ಸ್ಪರ್ಧಿಸುವ ಸಾಧ್ಯತೆಗಳಿವೆ.

Advertisement

ರಿಪಬ್ಲಿಕನ್‌ ಪಕ್ಷದಿಂದ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಫೆ.15ರಂದು  ರಾಜಕೀಯ ಜೀವನದ ಮುಂದಿನ ಹಂತವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ. ತಮ್ಮ ಬೆಂಬಲಿಗರು ಹಾಗೂ ಆತ್ಮೀಯರಿಗೆ ಈ ಬಗ್ಗೆ ಆಮಂತ್ರಣ ನೀಡಿದ್ದಾರೆ.

ಒಂದು ವೇಳೆ, ಅವರ ಅಭ್ಯರ್ಥಿತನ ಅಧಿಕೃತವೇ ಆದರೆ,  ರಿಪಬ್ಲಿಕನ್‌ ಪಕ್ಷದಿಂದ ನಾಮನಿರ್ದೇಶನಗೊಳ್ಳಲು ಕಾಯುತ್ತಿರುವ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರನ್ನು ಎದುರಿಸಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next