ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು ಪರಿಣಾಮ ಲಾಸ್ ವೇಗಾಸ್‌ಗೆ ಚುನಾವಣಾ ಪ್ರಚಾರ ಮೊಟಕುಗೊಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬೈಡೆನ್ ಅವರ ಆರೋಗ್ಯದ ಬಗ್ಗೆ ವೈಟ್ ಹೌಸ್ ಕೂಡ ಮಾಹಿತಿ ಬಿಡುಗಡೆ ಮಾಡಿದೆ. ಬೈಡೆನ್ ಅವರಿಗೆ ಕೋವಿಡ್ ದೃಢ ಪಡುವುದು ಇದು ಎರಡನೇ ಭಾರಿಯಾಗಿದ್ದು ಈ ಹಿಂದೆ ಜುಲೈ 2022 ರಲ್ಲಿ ಕೂಡ ದೃಢಪಟ್ಟಿತ್ತು.
ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ಬುಧವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು ಈ ವೇಳೆ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಕೋವಿಡ್ ಸೋಂಕಿಗೆ ತುತ್ತಾಗಿರುವುದು ಖಚಿತವಾದ ಬಳಿಕ ಬೈಡನ್ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಜೋ ಬಿಡೆನ್ ರೆಹೋಬೋತ್‌ನಲ್ಲಿರುವ ತನ್ನ ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಕೆವಿನ್ ಓ ಕಾನರ್ ಪ್ರಕಾರ, ಬೈಡೆನ್ ಪ್ರಸ್ತುತ ಕೆಮ್ಮು, ಶೀತ ಜೊತೆಗೆ ಆಯಾಸದಿಂದ ಬಳಲುತ್ತಿದ್ದು ಕೋವಿಡ್ ನ ಸೌಮ್ಯ ಲಕ್ಷಣಗಳನ್ನು ಕಂಡುಬಂದಿವೆ ಇದಕ್ಕಾಗಿ ಔಷಧಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Shiradi Ghatನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದು ಬಿದ್ದ ಗುಡ್ಡ: ಚಾಲಕ ಪಾರು