Advertisement
24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಜೊಕೋವಿಕ್ ಸ್ಪೇನ್‌ನ ಬೆರ್ನಾಬೆ ಝಪಟ ಮಿರಾಲೆಸ್ ಅವರು° 6-4, 6-1, 6-1 ಸೆಟ್‌ಗಳಿಂದ ಕೆಡಹಿ ಮೂರನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಅವರು ತನ್ನ ದೇಶದವರೇ ದ ಲಾಸ್ಲೊ ಡಿಜರೆ ಅವರನ್ನು ಎದುರಿಸಲಿದ್ದಾರೆ.
ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಸ್ವಿಸ್‌ನ ಡೊಮಿನಿಕ್ ಸ್ಟ್ರೈಕರ್ ಅವರು ಏಳನೇ ಶ್ರೇಯಾಂಕದ ಸಿಸಿಪಸ್ ಅವರನ್ನು 7-5, 6-7 (2), 6-7 (5), 7-6 (6), 6-3 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. ಇದು ಸ್ಟ್ರೈಕರ್ ಅವರ ಬಾಳ್ವೆಯ ಬಲುದೊಡ್ಡ ಗೆಲುವು ಆಗಿದೆ. ಇಲ್ಲಿ ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡಿದ ಸ್ಟ್ರೈಕರ್ ಅವರು ಅಮೋಘ ಸರ್ವ್ ಮತ್ತು ಕೌಶಲದ ಆಟದಿಂದಾಗಿ ಮೇಲುಗೈ ಸಾಧಿಸಿ ಗೆಲುವಿನ ಸಂಭ್ರಮ ಆಚರಿಸಿದರು. ಝಾಂಗ್‌ಗೆ ಅಚ್ಚರಿಯ ಗೆಲುವು
ಕಳೆದ ವರ್ಷದ ರನ್ನರ್ ಅಪ್ ಕ್ಯಾಪ್ಸರ್ ರೂಡ್ ಅವರನ್ನು 6-4, 5-7, 6-2, 0-6, 6-2 ಸೆಟ್‌ಗಳಿಂದ ಸೋಲಿಸಿದ ಚೀನದ ಝಾಂಗ್ ಝಿಝೆನ್ ಅಚ್ಚರಿಯ ಗೆಲುವು ದಾಖಲಿಸಿದರು. 1973ರಲ್ಲಿ ಎಟಿಪಿ ರ್‍ಯಾಂಕಿಂಗ್ ಆರಂಭಿಸಿದ ಬಳಿಕ ಅಗ್ರ ಐವರೊಳಗಿನ ಎದರಾಳಿಯನ್ನು ಸೋಲಿಸಿದ ಮೊದಲ ಚೀನದ ಆಟಗಾರ ಎಂಬ ಗೌರವಕ್ಕೆ ಝಾಂಗ್ ಪಾತ್ರರಾಗಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಫ್ರಾನ್ಸೆಸ್ ತಿಯಾಪೋಯಿ, ಟೇಲರ್ ಫ್ರಿಟ್ಜ್ ಮತ್ತು ಟಾಮಿ ಪಾಲ್ ಗೆಲುವಿನೊಂದಿಗೆ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
Related Articles
ವಿಶ್ವದ ನಂಬರ್ ವನ್ ಐಗಾ ಸ್ವಿಯಾಟೆಕ್ ಅವರು ಆಸ್ಟ್ರೇಲಿಯದ ದಾರಿಯಾ ಸವಿಲ್ಲೆ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಹದಿಹರೆಯದ ಅನುಭವಿಗಳ ಹೋರಾಟದಲ್ಲಿ ಅಮೆರಿಕದ ಆರನೇ ಶ್ರೇಯಾಂಕದ ಕೊಕೊ ಗಾಫ್ ಅವರು ರಷ್ಯಾದ ಮಿರ್ರಾ ಆ್ಯಂಡ್ರೀವಾ ಅವರನ್ನು 6-3, 6-2 ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು. ಗಾಫ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್ ಅವರನ್ನು ಎದುರಿಸಲಿದ್ದಾರೆ.
Advertisement
ವೋಜ್ನಿಯಾಕಿಗೆ ದೊಡ್ಡ ಜಯ11ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಅವರನ್ನು 7-5, 7-6 (5) ಸೆಟ್‌ಗಳಿಂದ ಮಣಿಸಿದ ಕ್ಯಾರೋಲಿನ್ ವೋಜ್ನಿಯಾಕಿ ಮುಂದಿನ ಸುತ್ತಿಗೆ ಮುನ್ನಡೆದರು. ಇದು ಅವರ ಬಾಳ್ವೆಯ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ.