Advertisement
ಸೋಮವಾರ ರಾತ್ರಿಯ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಜೊಕೋವಿಕ್ ಫ್ರಾನ್ಸ್ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ 6-0, 6-2, 6-3 ಅಂತರದ ಸುಲಭ ಜಯ ದಾಖಲಿಸಿದರು.
4ನೇ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ ಹೋಲ್ಜರ್ ರುನೆ ಅವರ ಸೋಲು ಮೊದಲ ದಿನದ “ಬಿಗ್ ಅಪ್ಸೆಟ್’ ಎನಿಸಿತು. ಅವರನ್ನು ಸ್ಪೇನ್ನ 63ನೇ ರ್ಯಾಂಕಿಂಗ್ ಆಟಗಾರ ರಾಬರ್ಟೊ ಕಾರ್ಬಲ್ಲೆಸ್ ಬೇನ 6-3, 4-6, 6-3, 6-2ರಿಂದ ಮಣಿಸಿದರು. ಬೇನ ಟಾಪ್-10 ಯಾದಿಯ ಆಟಗಾರನನ್ನು ಸೋಲಿಸಿದ ಮೊದಲ ನಿದರ್ಶನ ಇದಾಗಿದೆ. ವನಿತಾ ವಿಭಾಗ
ವನಿತಾ ವಿಭಾಗದ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಸ್ವೀಡನ್ನ ರೆಬೆಕ್ಕಾ ಪೀಟರ್ಸನ್ ಅವರನ್ನು 6-0, 6-1ರಿಂದ ಸುಲಭದಲ್ಲಿ ಸೋಲಿಸಿದರು. 58 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಆದರೆ ಆತಿಥೇಯ ನಾಡಿನ ಆಟಗಾರ್ತಿ, 2017ರ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಇವರನ್ನು ಕೆಡವಿದವರು ಬೀಟ್ರಿಝ್ ಹದ್ದಾದ್ ಮಯಾ. ಅಂತರ 6-2, 5-7, 6-4.
Related Articles
Advertisement