ನ್ಯೂಯಾರ್ಕ್: ಈ ವರ್ಷದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಕೂಟದ ಒಟ್ಟು ಬಹುಮಾನ ಮೊತ್ತ ಶೇ.15 ಹೆಚ್ಚಾಗಿದೆ. ಪರಿಣಾಮ ಒಟ್ಟು ಬಹುಮಾನ ಮೊತ್ತ 75 ಮಿಲಿಯನ್ ಡಾಲರ್ (629 ಕೋಟಿ ರೂ.) ತಲುಪಿದೆ. ಇದು ಟೆನಿಸ್ ಇತಹಾಸದಲ್ಲಿಯೇ ಗರಿಷ್ಠ ಬಹುಮಾನ ಮೊತ್ತವಾಗಿದೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ತಿಳಿಸಿದೆ. ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಟಗಾರರು 3.6 ಮಿಲಿಯನ್ ಡಾಲರ್ ನಗದು ಗಳಿಸಲಿದ್ದಾರೆ. ಇದು ಕಳೆದ ವರ್ಷದ ಪಾವತಿಗಿಂತ ಶೇಕಡಾ 20 ಹೆಚ್ಚಳವಾಗಿದೆ.
ಹಿಂದೆ ಸರಿದ ನಡಾಲ್
ಖ್ಯಾತ ಟೆನಿಸ್ ತಾರೆ ರಫೆಲ್ ನಡಾಲ್ ಅವರು ಮುಂಬರುವ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದಿಂದ ಹಿಂದೆ ಸರಿದಿದ್ದಾರೆ. ಅವರು ಈ ಋತುವಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಮೂರನೇ ಗ್ರ್ಯಾನ್‌ಸ್ಲಾಮ್ ಇದಾಗಿದೆ. ಇದರಿಂದಾಗಿ 38ರ ಹರೆಯದ ನಡಾಲ್ ಅವರ ಟೆನಿಸ್ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ.