Advertisement

US Open: ಜಾನಿಕ್‌ ಸಿನ್ನರ್‌ ಸೆಮಿಫೈನಲಿಗೆ

12:04 AM Sep 06, 2024 | Team Udayavani |

ನ್ಯೂಯಾರ್ಕ್‌: ಅಗ್ರ ರ್‍ಯಾಂಕಿನ ಜಾನಿಕ್‌ ಸಿನ್ನರ್‌ 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು ನಾಲ್ಕು ಸೆಟ್‌ಗಳ ಹೋರಾಟದಲ್ಲಿ 6-2, 1-6, 6-1, 6-4 ಸೆಟ್‌ಗಳಿಂದ ಕೆಡಹಿ ಮೊದಲ ಬಾರಿಗೆ ಯುಎಸ್‌ ಓಪನ್‌ ಟೆನಿಸ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದ್ದಾರೆ.

Advertisement

ಕೂಟದ ಮೊದಲ ವಾರದಲ್ಲಿಯೇ ನೋವಾಕ್‌ ಜೊಕೋವಿಕ್‌ ಮತ್ತು ಕಾರ್ಲೋಸ್‌ ಅಲ್ಕರಾಜ್‌ ಅವರ ನಿರ್ಗಮದಿಂದಾಗಿ ಸಿನ್ನರ್‌ ಅವರ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಟಗಾರರಾಗಿ ಕಾಣಿಸಿಕೊಂಡಿದ್ದರು. ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಏಕೈಕ ಆಟಗಾರರಾಗಿ ಸಿನ್ನರ್‌ ಕಣದಲ್ಲಿ ಉಳಿದಿದ್ದಾರೆ. ಅವರು ಕಳೆದ ಜನವರಿಯಲ್ಲಿ ಮೆಡ್ವೆಡೇವ್‌ ಅವರನ್ನು ಸೋಲಿಸಿ ಆಸ್ಟ್ರೇಲಿಯನ್‌ ಓಪನ್‌ ಕೂಟದ ಪ್ರಶಸ್ತಿ ಜಯಿಸಿದ್ದರು. ಇದು ಅವರ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ.

ಇಟಲಿಯ 23ರ ಹರೆಯದ ಸಿನ್ನರ್‌ ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಜಾಕ್‌ ಡ್ರಾಪರ್‌ ಅವರ ಸವಾಲನ್ನು ಎದುರಿಸಲಿದ್ದಾರೆ. 22ರ ಹರೆಯದ ಡ್ರಾಪರ್‌ ಇನ್ನೊಂದು ಪಂದ್ಯದಲ್ಲಿ ಅಲೆಕ್ಸ್‌ ಡಿ ಮಿನೌರ್‌ ಅವರನ್ನು 6-3, 7-5, 6-2 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದರು. ಡ್ರಾಪರ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ಸೆಮಿಫೈನಲ್‌ ತಲಪಿರುವುದು ಇದೇ ಮೊದಲ ಸಲವಾಗಿದೆ. 2012ರಲ್ಲಿ ಆ್ಯಂಡಿ ಮರ್ರೆ ಪ್ರಶಸ್ತಿ ಗೆದ್ದ ಬಳಿಕ ಇಲ್ಲಿ ಬ್ರಿಟನ್‌ನ ಆಟಗಾರನೋರ್ವ ಸೆಮಿಫೈನಲ್‌ ತಲಪಿರುವುದು ಇದೇ ಮೊದಲ ಸಲವಾಗಿದೆ.

ಇನ್ನೊಂದು ಸೆ‌ಮಿಫೈನಲ್‌ ಪಂದ್ಯದಲ್ಲಿ ಅಮೆರಿಕದ ಇಬ್ಬರು ಆಟಗಾರರು ಮುಖಾಮುಖಿ ಆಗುತ್ತಿದ್ದು ಒಬ್ಬರು ಫೈನಲ್‌ ಹಂತಕ್ಕೇರುವುದು ಖಚಿತವಾಗಿದೆ. ಅಮೆರಿಕದವರಾದ ಫ್ರಾನ್ಸೆಸ್‌ ಥಿಯಾಫೊ ಮತ್ತು ಟೇಲರ್‌ ಫ್ರಿಟ್ಜ್ ಸೆಮಿಫೈನಲ್‌ನಲ್ಲಿ ಮುಖಾ ಮುಖಿ ಆಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next