ಆಸ್ಟ್ರೇಲಿಯನ್ ಓಪನ್ ಚಾಂಪಿ ಯನ್, ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಕೂಡ ನೆಚ್ಚಿನ ಆಟ ಗಾರ್ತಿಯಾಗಿದ್ದು, ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಮರಿನಾ ಝನೇವ್‌ಸ್ಕಾ ವಿರುದ್ಧ ಆಡಲಿದ್ದಾರೆ. ಸಬಲೆಂಕಾ ಗೆಲ್ಲುತ್ತ ಹೋದರೆ ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ವರ್ಷದ ರನ್ನರ್ ಅಪ್ ಓನ್ಸ್ ಜೆಬ್ಯುರ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
Advertisement
ಎರಡು ಬಾರಿಯ ಚಾಂಪಿಯನ್, ಆತಿಥೇಯ ದೇಶದ ಹಿರಿಯ ಆಟ ಗಾರ್ತಿ ವೀನಸ್ ವಿಲಿಯಮ್ಸ್ ಇಲ್ಲಿ 24ನೇ ಸಲ ಆಡಲಿಳಿಯಲಿದ್ದು, ಸ್ಪೇನ್‌ನ ಪೌಲಾ ಬಡೋಸಾ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ. ವೀನಸ್ ಅವರಿಲ್ಲಿ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ.
“ಟಾಪ್ ಹಾಫ್ ಡ್ರಾ’ದಲ್ಲಿ ಮಾಜಿ ಗ್ರ್ಯಾನ್‌ಸ್ಲಾಮ್ ವಿಜೇತರಾದ ಜೆಲೆನಾ ಒಸ್ಟಾಪೆಂಕೊ, ಪೆಟ್ರಾ ಕ್ವಿಟೋವಾ, ಕ್ಯಾರೋಲಿನ್ ವೋಜ್ನಿಯಾಕಿ, ವಿಕ್ಟೋ ರಿಯಾ ಅಜರೆಂಕಾ, ಸ್ಲೋನ್ ಸ್ಟೀಫನ್ಸ್, 4ನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಮೊದಲಾದವರಿದ್ದಾರೆ. ಇವರಲ್ಲಿ ರಿಬಾಕಿನಾ ನ್ಯೂಯಾರ್ಕ್‌ನಲ್ಲಿ 3ನೇ ಸುತ್ತು ದಾಟಿದವರಲ್ಲ. ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಮಾರ್ತಾ ಕೋಸ್ಟುéಕ್ ವಿರುದ್ಧ ಸೆಣಸಲಿದ್ದಾರೆ.
ಇತ್ತೀಚೆಗಷ್ಟೇ ನಿವೃತ್ತಿಯಿಂದ ಹಿಂದೆ ಸರಿದು ಬಂದ ವೋಜ್ನಿಯಾಕಿ ಅವರಿಗೆ ವೈಲ್ಡ್‌ಕಾರ್ಡ್ ಲಭಿಸಿದ್ದು, ದ್ವಿತೀಯ ಸುತ್ತಿನಲ್ಲಿ ಪೆಟ್ರಾ ಕ್ವಿಟೋವಾ ಅವರನ್ನು ಎದುರಿಸಬಹುದು. ಬಾಟಮ್ ಹಾಫ್ ಡ್ರಾ
ಕೂಟದ “ಬಾಟಮ್ ಹಾಫ್ ಡ್ರಾ’ದಲ್ಲಿ ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ನೆಚ್ಚಿನ ಆಟಗಾರ್ತಿಯಾಗಿ ಗೋಚರಿಸುತ್ತಿದ್ದಾರೆ. ವಿಂಬಲ್ಡನ್ ಗೆದ್ದ ಮಾರ್ಕೆಟಾ ವೊಂಡ್ರುಸೋವಾ, ಮಾಜಿ ಚಾಂಪಿಯನ್ ಬಿಯಾಂಕಾ ಆ್ಯಂಡ್ರೀಸ್ಕೂ, ಜೆಸ್ಸಿಕಾ ಪೆಗುಲಾ ಓನ್ಸ್ ಜೆಬ್ಯೂರ್ ಮೊದಲಾದವರಿದ್ದಾರೆ.
Related Articles
Advertisement