Advertisement

US Open;ಅಮೆರಿಕದ ಟೇಲರ್‌ ಫ್ರಿಟ್ಜ್ ಗೆ ಸೋಲು:ಸಿನ್ನರ್‌ ಯುಎಸ್‌ ಚಾಂಪಿಯನ್‌

12:09 AM Sep 10, 2024 | Team Udayavani |

ನ್ಯೂಯಾರ್ಕ್‌: ಅಮೋಘ ಆಟದ ಪ್ರದರ್ಶನ ನೀಡಿದ ಇಟೆಲಿಯ ಜಾನ್ನಿಕ್‌ ಸಿನ್ನರ್‌ ಅವರು ರವಿವಾರ ನಡೆದ ಫೈನಲ್‌ ಹೋರಾಟದಲ್ಲಿ ಅಮೆ ರಿಕದ ಟೇಲರ್‌ ಫ್ರಿಟ್ಜ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಯುಎಸ್‌ ಓಪನ್ ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದುಕೊಂಡರು. ಸಿನ್ನರ್‌ ಪ್ರಶಸ್ತಿ ಗೆದ್ದ ಇಟೆಲಿಯ ಮೊದಲ ಆಟಗಾರರಾಗಿದ್ದಾರೆ.

Advertisement

ಬೇಸ್‌ಲೈನ್‌ನಲ್ಲಿ ತನ್ನ ಶಕ್ತಿಯ ಅಮೋಘ ಪ್ರದರ್ಶನ ನೀಡಿದ ಸಿನ್ನರ್‌ ಅವರು 6-3, 6-4, 7-5 ಸೆಟ್‌ಗಳಿಂದ ಫ್ರಿಟ್ಜ್ ಅವರ ಆಟವನ್ನು ಅಂತ್ಯಗೊಳಿಸಿದರು. ಫ್ರಿಟ್ಜ್ ಈ ಬಾರಿ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುತ್ತಾರೆಂದು ಸ್ಥಳೀಯ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು,. ಆದರೆ ಸಿನ್ನರ್‌ ಅವರ ಅದ್ಭುತ ಆಟದಿಂದ ಫ್ರಿಟ್ಜ್ ಕೊನೆಗೆ ಶರಣಾಗಬೇಕಾಯಿತು. ಗೆದ್ದ ತತ್‌ಕ್ಷಣ ಸಿನ್ನರ್‌ ಎರಡೂ ಕೈ ಮೇಲಕ್ಕೆ ಎತ್ತಿ ಸಂಭ್ರಮ ಆಚರಿಸಿದರು.

ಅಗ್ರ ಶ್ರೇಯಾಂಕದ ಸಿನ್ನರ್‌ ಅವರಿಗಿದು ಎರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ಅವರು ಈ ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಕೂಟದ ಪ್ರಶಸ್ತಿ ಜಯಿಸಿದ್ದರು. ಈ ಋತುವಿನಲ್ಲಿ ನಾನು ಹಲವು ದೊಡ್ಡ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇನೆ. ಆಸ್ಟ್ರೇಲಿಯದಿಂದ ಇದು ಆರಂಭವಾಗಿದೆ. ಅದ್ಭುತವಾಗಿ ಆಡುತ್ತಿರುವ ಕಾರಣ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಸಿನ್ನರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next