Advertisement
ಇಗಾ ಸ್ವಿಯಾಟೆಕ್ ಜಪಾನಿನ ಅರ್ಹತಾ ಆಟ ಗಾರ್ತಿ ಎನಾ ಶಿಬಹಾರ ಅವರನ್ನು 6-0, 6-1ರಿಂದ ಸುಲಭದಲ್ಲಿ ಸೋಲಿಸಿದರು. ಆದರೆ ಜಪಾನಿನ ನವೋಮಿ ಒಸಾಕಾ ಅವರ ಆಟಕ್ಕೆ ಕ್ಯಾರೋಲಿನಾ ಮುಖೋವಾ 6-3, 7-6 (5)ರಿಂದ ತೆರೆ ಎಳೆದರು.
Related Articles
ಪುರುಷರ ಸಿಂಗಲ್ಸ್‌ನಲ್ಲಿ ಜಾನಿಕ್ ಸಿನ್ನರ್ ಆತಿಥೇಯ ದೇಶದ ಅಲೆಕ್ಸ್ ಮೈಕಲ್‌ಸನ್ ವಿರುದ್ಧ 6-4, 6-0, 6-2ರಿಂದ ಗೆದ್ದು ಬಂದರು. 2021ರ ಚಾಂಪಿಯನ್, 5ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೇವ್, 10ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಮೂಡ 3ನೇ ಸುತ್ತು ತಲುಪಿದ್ದಾರೆ. ಮೆಡ್ವೆಡೇವ್ ಹಂಗೇರಿಯ ಫ್ಯಾಬಿಯನ್ ಮರೊಝಾನ್ ಅವರನ್ನು 6-3, 6-2, 7-6 (7-5) ಅಂತರದಿಂದ, ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಫಿನ್ಲಂಡ್‌ನ ಓಟೊ ವಿರ್ಟಾನೆನ್ ಅವರನ್ನು 7-5, 6-1, 7-6 (7-3)ರಿಂದ ಹಿಮ್ಮೆಟ್ಟಿಸಿದರು.
Advertisement
7ನೇ ಶ್ರೇಯಾಂಕದ ಹರ್ಬರ್ಟ್ ಹುರ್ಕಾಝ್ ಮತ್ತು 16ನೇ ಶ್ರೇಯಾಂಕದ ಸೆಬಾಸ್ಟಿಯನ್ ಕೋರ್ಡ ಪರಾಭವಗೊಂಡರು.
ಬೋಪಣ್ಣ-ಎಬ್ಡೆನ್ ದ್ವಿತೀಯ ಸುತ್ತಿಗೆಕಳೆದ ವರ್ಷದ ಫೈನಲ್‌ನಲ್ಲಿ ಎಡವಿದ್ದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ (ಆಸ್ಟ್ರೇಲಿಯ) ಯುಎಸ್ ಓಪನ್ ಪುರುಷರ ಡಬಲ್ಸ್ ನಲ್ಲಿ ಮೊದಲ ಸುತ್ತನ್ನು ದಾಟಿದ್ದಾರೆ. ಇವರಿಬ್ಬರು ಸೇರಿಕೊಂಡು ನೆದರ್ಲೆಂಡ್ಸ್‌ನ ಸ್ಯಾಂಡರ್ ಆರೆಂಡ್ಸ್-ರಾಬಿನ್ ಹಾಸೆ ವಿರುದ್ಧ 6-3, 7-5 ಅಂತರದ ಗೆಲುವು ಸಾಧಿಸಿದರು. ಅಲ್ಕರಾಜ್‌ಗೆ ಸೋಲಿನ ಆಘಾತ
ಸ್ಪೇನಿನ ನೆಚ್ಚಿನ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರ ಸತತ 15 ಪಂದ್ಯಗಳ ಗ್ರ್ಯಾನ್‌ಸ್ಲಾಮ್ ಗೆಲುವಿನ ಓಟಕ್ಕೆ ನ್ಯೂಯಾರ್ಕ್‌ನಲ್ಲಿ ತೆರೆ ಬಿದ್ದಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರನ್ನು ನೆದರ್ಲೆಂಡ್ಸ್‌ನ, 74ನೇ ರ್‍ಯಾಂಕ್ ಆಟಗಾರ ಬೋಟಿಲ್ ವಾನ್ ಡೆ ಝಾಂಡ್‌ಶಪ್ 6-1, 7-5, 6-4 ಅಂತರದಿಂದ ಮಣಿಸಿ ಕೂಟದ ದೊಡ್ಡದೊಂದು ಏರುಪೇರಿನ ಫಲಿತಾಂಶ ದಾಖಲಿಸಿದರು.