Advertisement
ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯದ ಕ್ರಿಸ್ ಓ’ಕೋನೆಲ್ ಅವರನ್ನು 6-1, 6-4, 6-2ರಿಂದ ಮಣಿಸಿದರು. ಇವರ ಮುಂದಿನ ಎದುರಾಳಿ ಆತಿಥೇಯ ಅಮೆರಿಕದ ಟಾಮಿ ಪೌಲ್. ಇನ್ನೊಂದು ಪಂದ್ಯದಲ್ಲಿ ಅವರು ಕೆನಡಾದ ಗ್ಯಾಬ್ರಿಯಲ್ ಡಯಾಲೊ ವಿರುದ್ಧ 6-7 (5-7), 6-3, 6-1, 7-6 (7-3) ಅಂತರದ ಜಯ ಸಾಧಿಸಿದರು.
ವನಿತಾ ಸಿಂಗಲ್ಸ್ನಲ್ಲಿ ಇಗಾ ಸ್ವಿಯಾ ಟೆಕ್ 25ನೇ ಶ್ರೇಯಾಂಕದ ಅನಾಸ್ತಾ ಸಿಯಾ ಪಾವುÉಚೆಂಕೋವಾ ಅವರನ್ನು 6-4, 6-2 ಸೆಟ್ಗಳಲ್ಲಿ ಮಣಿಸಿದರು.
Related Articles
Advertisement
ಜೆಸ್ಸಿಕಾ ಪೆಗುಲಾ, ಲುಡ್ಮಿಲಾ ಸಾಮ್ಸ ನೋವಾ, ಡಯಾನಾ ಶ್ನೆ„ಡರ್, ಕ್ಯಾರೋ ಲಿನ್ ವೋಜ್ನಿಯಾಕಿ ಕೂಡ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ಗೆಮಿಶ್ರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಇಂಡೋನೇಷ್ಯಾ ಜತೆಗಾರ್ತಿ ಅಲ್ದಿಲಾ ಸುಜಿಯಾದಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇವರು ಆಸ್ಟ್ರೇಲಿಯದ ಜಾನ್ ಪಿಯರ್-ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ವಿರುದ್ಧ ಭಾರೀ ಹೋರಾಟ ನಡೆಸಿ 0-6, 7-6 (5), 10-7 ಅಂತರದಿಂದ ಗೆದ್ದು ಬಂದರು. ಒಂದು ಗಂಟೆ, 13 ನಿಮಿಷಗಳ ತನಕ ಈ ಸ್ಪರ್ಧೆ ಸಾಗಿತು. ದ್ವಿತೀಯ ಶ್ರೇಯಾಂಕದ ಬೋಪಣ್ಣ-ಸುಜಿಯಾದಿ ಕ್ವಾರ್ಟರ್ ಫೈನಲ್ನಲ್ಲಿ 4ನೇ ಶ್ರೇಯಾಂಕದ ಮ್ಯಾಥ್ಯೂ ಎಬ್ಡೆನ್-ಬಾರ್ಬೊರಾ ಕ್ರೆಜಿಕೋವಾ ಅವರನ್ನು ಎದುರಿಸುವರು. ಪುರುಷರ ಡಬಲ್ಸ್ನಲ್ಲೂ ಬೋಪಣ್ಣ ಮುನ್ನಡೆದಿದ್ದಾರೆ. ಮ್ಯಾಥ್ಯೂ ಎಬ್ಡೆನ್ ಜತೆಗೂಡಿ 3ನೇ ಸುತ್ತಿನಲ್ಲಿದ್ದಾರೆ.