Advertisement
ಗ್ರೀಸ್‌ನ ದೈತ್ಯ ಆಟಗಾರ ಸ್ಟೆಫಾನಸ್ ಸಿಸಿಪಸ್, ಹಾಲಿ ವನಿತಾ ಚಾಂಪಿಯನ್ ನವೋಮಿ ಒಸಾಕಾ, ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಆಘಾತಕಾರಿ ಸೋಲಿನೊಂದಿಗೆ ಕೂಟದಿಂದ ನಿರ್ಗಮಿಸಿದ್ದಾರೆ.
Related Articles
Advertisement
ಸಿಮೋನಾ 3 ಸೆಟ್ ಥ್ರಿಲ್ಲರ್: ರೊಮೇನಿಯದ ಸಿಮೋನಾ ಹಾಲೆಪ್ ಕೂಡ ಅಪಾಯದ ಅಂಚಿನಲ್ಲಿದ್ದರು. ಕಝಕಸ್ತಾನದ ಎಲೆನಾ ರಿಬಾಕಿನಾ ದೊಡ್ಡದೊಂದು ಅಪಸೆಟ್‌ಗೆ ಸ್ಕೆಚ್ ಹಾಕಿದ್ದರು. ಆದರೆ ಹಾಲೆಪ್ ತಿರುಗಿ ಬಿದ್ದು 7-6 (11-13), 6-4, 6-3 ಅಂತರದ ಗೆಲುವು ಕಾಣಲು ಯಶಸ್ವಿಯಾದರು. ಗಾರ್ಬಿನ್ ಮುಗುರುಜಾ ಮತ್ತು ವಿಕ್ಟೋರಿಯಾ ಅಜರೆಂಕಾ ನಡುವಿನ ಸ್ಪರ್ಧೆಯೂ 3 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಇದನ್ನು ಮುಗುರುಜಾ 6-4, 3-6, 6-2ರಿಂದ ಗೆದ್ದರು. ಜರ್ಮನಿಯ ಏಂಜೆಲಿಕ್ ಕೆರ್ಬರ್ ಹಾಗೂ ಅಮೆರಿಕದ ಮಾಜಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಕೂಡ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾದರು. ಕೆರ್ಬರ್ 5-7, 6-2, 6-3ರಿಂದ ಗೆದ್ದು 4ನೇ ಸುತ್ತಿಗೇರಿದರು.
ಸೋತು ಅತ್ತು, ವಿರಾಮ ಪಡೆಯುತ್ತೇನೆಂದ ಒಸಾಕಾ:
ನವೋಮಿ ಒಸಕಾಗೆ ಆಘಾತವಿಕ್ಕಿದವರು ಕೆನಡಾದ 18ರ ಹರೆಯದ, 73ನೇ ರ್‍ಯಾಂಕಿಂಗ್ ಆಟಗಾರ್ತಿ ಲೇಲಾ ಫೆರ್ನಾಂಡಿಸ್. ಅಂತರ 5-7, 7-6 (7-2), 6-4. ಈ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಒಸಾಕಾ, ತಾನು ಸ್ವಲ್ಪ ಕಾಲ ಟೆನಿಸ್‌ನಿಂದ ಬ್ರೇಕ್ ಪಡೆದುಕೊಳ್ಳುವುದಾಗಿ ಹೇಳಿದರು. ಇತ್ತೀಚೆಗೆ ತಮ್ಮದೇ ನಾಡಾದ ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಆಘಾತಕಾರಿಯಾಗಿ ಸೋತಿದ್ದ ಅವರು, ಇಲ್ಲೂ ಸೋಲುವುದರೊಂದಿಗೆ ದಿಗ್ಭ್ರಮೆ ಅನುಭವಿಸಿದರು. ಹಾಗಾಗಿ ಕಣ್ಣೀರು ಹಾಕಿದರು.