Advertisement

ಯುಎಸ್‌ ಓಪನ್‌: ಕ್ವಿಟೋವಾಗೆ ಸೋಲು: ವೀನಸ್‌ ಸೆಮಿಫೈನಲಿಗೆ

06:50 AM Sep 07, 2017 | |

ನ್ಯೂಯಾರ್ಕ್‌: ಅಮೆರಿಕದ ಟೆನಿಸ್‌ ತಾರೆ ವೀನಸ್‌ ವಿಲಿಯಮ್ಸ್‌ ಯುಎಸ್‌ ಓಪನ್‌ನ ಸೆಮಿಫೈನಲ್‌ ಹೋರಾಟದಲ್ಲಿ ತನ್ನ ದೇಶದವರೇ ಆದ ಸ್ಲೋನ್‌ ಸ್ಟೀಫ‌ನ್ಸ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

Advertisement

ತನ್ನ ಎಂಟನೇ ಮತ್ತು ಮೂರನೇ ಯುಎಸ್‌ ಓಪನ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ 37ರ ಹರೆಯದ ವೀನಸ್‌ ಎರಡು ಬಾರಿಯ ವಿಂಬಲ್ಡನ್‌ ವಿಜೇತೆ ಪೆಟ್ರಾ ಕ್ವಿಟೋವಾ ಅವರನ್ನು 6-3, 3-6, 7-6 (7-2) ಸೆಟ್‌ಗಳಿಂದ ಉರುಳಿಸಿದರು. ವೀನಸ್‌ ಯುಎಸ್‌ ಓಪನ್‌ನ ಮತ್ತು 1994ರಲ್ಲಿ ವಿಂಬಲ್ಡನ್‌ನಲ್ಲಿ ಮಾರ್ಟಿನಾ ನವ್ರಾಟಿಲೋವಾ ಬಳಿಕ ಯಾವುದೇ ಗ್ರ್ಯಾನ್‌ ಸ್ಲಾಮ್‌ನ ಸೆಮಿಫೈನಲ್‌ ತಲುಪಿದ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ.

1997ರ ಯುಎಸ್‌ ಓಪನ್‌ನಿಂದ ಕಳೆದ ಜುಲೈಯಲ್ಲಿ ವಿಂಬಲ್ಡನ್‌ ಫೈನಲ್‌ನಲ್ಲಿ ಗಾರ್ಬಿನ್‌ ಮುಗುರುಜಾ ಅವರಿಗೆ ಶರಣಾಗುವ ತನಕ ಸುದೀರ್ಘ‌ ಅವಧಿಯವರೆಗೆ ಗ್ರ್ಯಾನ್‌ ಸ್ಲಾಮ್‌ ಫೈನಲ್‌ನಲ್ಲಿ ಕಾಣಿಸಿಕೊಂಡ ತಾರೆ ಎಂಬ ಗೌರವಕ್ಕೆ ವೀನಸ್‌ ಪಾತ್ರರಾಗಿದ್ದಾರೆ. 20 ವರ್ಷಗಳ ಈ ಸುದೀರ್ಘ‌ ಅವಧಿಯಲ್ಲಿ ಅವರು ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. 2000 ಮತ್ತು 2001ರಲ್ಲಿ ಅವರು ಯುಎಸ್‌ ಓಪನ್‌ನ ಪ್ರಶಸ್ತಿಯನ್ನು ವೀನಸ್‌ ಗೆದ್ದಿದ್ದರು.

ಒಂದು ವೇಳೆ ಗುರುವಾರ ನಡೆಯವ ಸೆಮಿಫೈನಲ್‌ನಲ್ಲಿ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಕೆಡಹಿದರೆ ವೀನಸ್‌ ಈ ವರ್ಷ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟದ ಫೈನಲಿಗೇರಿದ ಸಾಧನೆ ಮಾಡಲಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ನಲ್ಲಿ ಅವರು ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಇಂತಹ ಸಾಧನೆಯನ್ನು ಅವರು 2002ರಲ್ಲಿ ಒಮ್ಮೆ ಮಾಡಿದ್ದರು. ಇದರಿಂದಾಗಿ ಅವರು 2011ರ ಬಳಿಕ ಇದೇ ಮೊದಲ ಸಲ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಅಗ್ರ ಐದರೊಳಗಿನ ಸ್ಥಾನಕ್ಕೇರುವ ಸಾಧ್ಯತೆಯಿದೆ.

ಸ್ಟೀಫ‌ನ್ಸ್‌ಗೆ ಗೆಲುವು
ಅಮೆರಿಕದವರೇ ಆದ ಸ್ಲೋನ್‌ ಸ್ಟೀಫ‌ನ್ಸ್‌ ಇನ್ನೊಂದು ಪಂದ್ಯದಲ್ಲಿ ಲಾತ್ವಿಯಾದ 16ನೇ ಶ್ರೇಯಾಂಕದ ಅನಸ್ತಾಸಿಯಾ ಸೆವಸ್ತೋವಾ ಅವರನ್ನು 6-3, 3-6, 7-6 (7-4) ಸೆಟ್‌ಗಳಿಂದ ಸೋಲಿಸಿದರು. ಎಡ ಪಾದದ ಗಾಯದಿಂದಾಗಿ 11 ತಿಂಗಳು ಟೆನಿಸ್‌ನಿಂದ ದೂರ ಉಳಿದಿದ್ದ ಸ್ಟೀಫ‌ನ್ಸ್‌ ವಿಂಬಲ್ಡನ್‌ನಲ್ಲಿ ಆಡುವ ಮೂಲಕ ಟೆನಿಸ್‌ ಕಣಕ್ಕೆ ಮರಳಿದ್ದರು. ಸೆಮಿಫೈನಲ್‌ ತಲುಪಿರುವುದು ಅವರ ಗ್ರ್ಯಾನ್‌ ಸ್ಲಾಮ್‌ ಕೂಟವೊಂದರ ಶ್ರೇಷ್ಠ ಸಾಧನೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next