Advertisement

ಉತ್ತರ ಕೊರಿಯ ಮಾತುಕತೆಗಿನ್ನು ಯಾವುದೇ ಶರ್ತ ಇಲ್ಲ: ಅಮೆರಿಕ

12:30 PM Mar 12, 2018 | udayavani editorial |

ವಾಷಿಂಗ್ಟನ್‌ : ಉತ್ತರ ಕೊರಿಯ ತಾನಿನ್ನು ಯಾವದೇ ಅಣು ಪರೀಕ್ಷೆ, ಕ್ಷಿಪಣಿ ಉಡಾವಣೆ ಪರೀಕೆಯನ್ನು ಮಾಡುವುದಿಲ್ಲ ಮತ್ತು ಅಮೆರಿಕ ಹಾಗೂ ದಕ್ಷಿಣ ಕೊರಿಯ ಸೇನಾ ಕವಾಯತನ್ನು ಬಹಿರಂಗವಾಗಿ ಟೀಕಿಸುವುದಿಲ್ಲ ಎಂಬ ಭರವಸೆಯನ್ನು ಅಮೆರಿಕದೊಂದಿಗಿನ ಪ್ರಪ್ರಥಮ ಸಭೆಯಲ್ಲಿ  ನೀಡಿದೆ. ಆದುದರಿಂದ ಇನ್ನು ಮುಂದಿನ ಮಾತುಕತೆಗೆ ಉತ್ತರ ಕೊರಿಯದ ಮೇಲೆ ಯಾವುದೇ ಶರ್ತವನ್ನು ವಿಧಿಸುವುದಿಲ್ಲ ಎಂದು ಟ್ರಂಪ್‌ ಆಡಳಿತೆ ಹೇಳಿದೆ. 

Advertisement

ಇದೇ ವರ್ಷ ಮೇ ತಿಂಗಳಲ್ಲಿ ಉತ್ತರ ಕೊರಿಯ ಕಿಮ್‌ ಜಾಂಗ್‌ ಉನ್‌ ಅವರನ್ನು ಭೇಟಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಳೆದ ವಾರ ಅತ್ಯಂತ ಅಚ್ಚರಿಯ ಹೇಳಿಕೆಯನ್ನು ಪ್ರಕಟಿಸಿದ್ದರು. ಇದನ್ನು ಅನುಸರಿಸಿ ಟ್ರಂಪ್‌ ಆಡಳಿತೆಯಿಂದ ಇಂದು ಈ ಹೊಸ ಹೇಳಿಕೆ ಹೊರಟು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next