Advertisement

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

01:47 AM May 10, 2024 | Team Udayavani |

ಮಾಸ್ಕೋ: ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ಇದರ ಜತೆಗೆ ಭಾರತದ ಆಂತರಿಕ ವ್ಯವಹಾರಗಳಲ್ಲಿ ಬೈಡೆನ್‌ ಆಡಳಿತ ಮೂಗು ತೂರಿಸುತ್ತಿದೆ ಎಂದು ಟೀಕಿಸಿದೆ.

Advertisement

ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯನ್ನು ಜಟಿಲಗೊಳಿ ಸುವುದಕ್ಕಾಗಿ ಭಾರತದ ಆಂತರಿಕ ರಾಜಕೀಯ ವ್ಯವಸ್ಥೆಯನ್ನು ಅಸಮತೋಲನಗೊಳಿಸುವ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಆರೋಪಿಸಿದ್ದಾರೆ.

ಭಾರತ ಕೂಡ ರಷ್ಯಾ ಮತ್ತು ಸೌದಿ ಅರೇಬಿಯಾದ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂಬ “ವಾಷಿಂಗ್ಟನ್‌ ಪೋಸ್ಟ್‌’ ವರದಿ ಕುರಿತು ಪ್ರತಿಕ್ರಿಯಿಸಿದ ಜಖರೋವಾ, ಖಲಿ ಸ್ಥಾನಿ ಉಗ್ರ ಗುರುಪತ್ವಂತ್‌ ಪನ್ನು ಹತ್ಯೆಸಂಚಿನಲ್ಲಿ ಭಾರತೀಯ ಪ್ರಜೆಗಳು ಭಾಗಿಯಾಗಿ ರುವ ಕುರಿತು ವಿಶ್ವಾಸಾರ್ಹವಾದ ಸಾಕ್ಷ್ಯಗಳನ್ನು ಇನ್ನೂ ಅಮೆರಿಕ ನೀಡಿಲ್ಲ.ಸಾಕ್ಷ್ಯಗಳ ವಿನಾ ಈ ವಿಷಯಕ್ಕೆ ಸಂಬಂಧಿಸಿದ ಊಹೆಗಳು ಸ್ವೀಕಾರಾ ರ್ಹವಲ್ಲ ಎಂದು ಅಮೆರಿಕದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕಕ್ಕೆ ಭಾರತದ ಇತಿಹಾಸ ತಿಳಿದಿಲ್ಲ
ಭಾರತದ ರಾಷ್ಟ್ರೀಯ ಮನಃಸ್ಥಿತಿ ಮತ್ತು ಇತಿಹಾಸದ ಕುರಿತು ಕಿಂಚಿತ್‌ ಜ್ಞಾನವೂ ಇಲ್ಲದ ಅಮೆರಿಕವು ಭಾರತದ ಧಾರ್ಮಿಕ ಸ್ವಾತಂತ್ರ್ಯ ಕುರಿತು ನಿರಂತರವಾಗಿ ಸತ್ಯವಲ್ಲದ ಆಪಾದನೆಗಳನ್ನು ಮಾಡುತ್ತಿದೆ. ಇದು ಭಾರತಕ್ಕೆ ತೋರುತ್ತಿರುವ ಅಗೌರವ ಎಂದು ಜಖರೋವಾ ಹೇಳಿದ್ದಾರೆ. ಇದೇ ವೇಳೆ ಅವರು ಲೋಕಸಭೆ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸುವ ಅಮೆ ರಿಕದ ಪ್ರಯತ್ನವು ವಸಾಹತುಶಾಹಿ ಕಾಲದ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next