Advertisement

NCP; ಅಜಿತ್ ಗೆ ಶಾಕ್ :ಶರದ್ ಪವಾರ್ ಬಣ ಸೇರುತ್ತಿರುವ ಪ್ರಮುಖರು

12:54 PM Jul 17, 2024 | Team Udayavani |

ಮುಂಬಯಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಸಿಎಂ ಏಕನಾಥ್ ಶಿಂಧೆ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಮೈತ್ರಿಕೂಟಕ್ಕೆ ಮಹಾರಾಷ್ಟ್ರದ ಮತದಾರರು ಶಾಕ್ ನೀಡಿದ್ದರು. ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಮುನ್ನ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಣ ಬದಲಾವಣೆ ಮಾಡುತ್ತಿದ್ದಾರೆ.

Advertisement

ಪಿಂಪ್ರಿ-ಚಿಂಚ್‌ವಾಡ್‌ನ ನಾಲ್ವರು ಉನ್ನತ ನಾಯಕರು ಅಜಿತ್ ಪವಾರ್ ಬಣ ತೊರೆದು ಬೆಂಬಲಿಗರೊಂದಿಗೆ ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಪಿಂಪ್ರಿ-ಚಿಂಚ್‌ವಾಡ್ ಘಟಕದ ಅಧ್ಯಕ್ಷ ಅಜಿತ್ ಗವಾಹನೆ, ವಿದ್ಯಾರ್ಥಿ ನಾಯಕ ಯಶ್ ಸಾನೆ ಮತ್ತು ಇಬ್ಬರು ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್ ಭೋಸಲೆ ಮತ್ತು ಪಂಕಜ್ ಭಾಲೇಕರ್ ಬೆಂಬಲಿಗರೊಂದಿಗೆ ಬುಧವಾರ ಶರದ್ ಪವಾರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

NCP(SCP) ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ “ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಅವರೊಂದಿಗೆ ಹೋದವರೆಲ್ಲರೂ ಸೋಲು ಕಂಡಿದ್ದಾರೆ. ಈಗ ಅವರೊಂದಿಗೆ ಹೋದವರೆಲ್ಲರೂ ಮುಂಬರುವ ಚುನಾವಣೆಯಲ್ಲಿ ಸೋಲಬಹುದು ಎಂದು ಹೇಳುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ, ಅನೇಕರು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರನ್ನು ತೊರೆಯಬಹುದು’ ಎಂದಿದ್ದಾರೆ.

‘ಆರ್‌ಎಸ್‌ಎಸ್-ಸಂಯೋಜಿತ ವಾರಪತ್ರಿಕೆಯಲ್ಲಿ, ಮಹಾರಾಷ್ಟ್ರದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಹಿನ್ನಡೆಗೆ NCP ಅಜಿತ್ ಪವಾರ್ ಪಕ್ಷದೊಂದಿಗಿನ ಮೈತ್ರಿ ಎಂದು ಆರೋಪಿಸಲಾಗಿದೆ “ಬಿಜೆಪಿಗೆ ಅಜಿತ್ ಪವಾರ್ ಅವರ ಅಗತ್ಯವಿಲ್ಲ ಎಂದು ತೋರಿಸುತ್ತದೆ. ಶರದ್ ಪವಾರ್ ನೇತೃತ್ವದ ಪಕ್ಷ ಯಾವುದು ಎಂದು ಮಹಾರಾಷ್ಟ್ರದ ಜನತೆ ಸಾಬೀತುಪಡಿಸಿದ್ದಾರೆ’ ಎಂದು ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

Advertisement

NCP(SCP) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ‘ಪಕ್ಷದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಅನುಭವಗಳಿವೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಿದ್ಧಾಂತ ಮತ್ತು ಅಭಿವೃದ್ಧಿಯ ಸಿದ್ಧಾಂತವನ್ನು ನಾವು ಎಂದಿಗೂ ಕುಗ್ಗಿಸಲು ಬಿಡುವುದಿಲ್ಲ. ಪವಾರ್ ಸಾಹಬ್ ಕಳೆದ 60 ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗಾಗಿ ನಾವು ಪವಾರ್ ಸಾಹಬ್ ಅವರ ಸಿದ್ಧಾಂತವನ್ನು ನಂಬುತ್ತೇವೆ ಆದರೆ ಇತರರು ಸಹ ಅವರನ್ನು ಬಹಳ ಭರವಸೆಯಿಂದ ನೋಡುತ್ತಿರುವುದರಿಂದ ಅವರೊಂದಿಗೆ ಸೇರಿಕೊಳ್ಳುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next