ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಮೆರಿಕ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿದೆ. ಅಲ್ಲದೇ ಇದನ್ನು ಅನುಚಿತ, ತಪ್ಪು ಮಾಹಿತಿ, ಅನಪೇಕ್ಷಿತ ಎಂದು ಕರೆದಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ, “ಸಿಎಎ ಪೌರತ್ವ ನೀಡುವ ಕಾಯ್ದೆಯಾಗಿದೆಯೇ ಹೊರತು, ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲ. ಇದು ಜನರಿಗೆ ಗೌರವ ನೀಡುವುದಲ್ಲದೇ ಮಾನವ ಹಕ್ಕುಗಳಿಗೆ ಬೆಂಬಲವನ್ನು ನೀಡುತ್ತದೆ’ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮಗಳಿಗೆ ಸಂಬಂಧಿಸಿರುವುದರಿಂದ ಅಮೆರಿಕ ಭಾರತದಲ್ಲಿ ನಡೆಯುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ. ಅಲ್ಲದೇ ಇದು ಅನುಚಿತವಾಗಿದ್ದು, ತಪ್ಪು ಮಾಹಿತಿಯಂದ ಕೂಡಿದೆ. ಇದನ್ನು ಜಾರಿ ಮಾಡುವುದು ಅನಪೇಕ್ಷಿತವಾಗಿತ್ತು ಎಂದು ನಮಗನ್ನಿಸುತ್ತದೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದರು.
ನಾವು ಒಂದು ದೇಶ ದೊಂದಿಗೆ ಎಷ್ಟೇ ಆಪ್ತರಾದರೂ ಸಹ ನಮ್ಮ ನೀತಿಗಳಿಗೆ ನಾವು ಬದ್ಧರಾಗಿರುತ್ತೇವೆ.
ಅಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ನೀವು ಕೂಡ ಇದನ್ನೇ ಪಾಲಿಸಬೇಕು ಎಂದು ನಾವು ಬಯಸುತ್ತೇವೆ.
ಎರಿಕ್ ಗಾರ್ಸೆಟ್ಟಿ, ಅಮೆರಿಕ ರಾಯಭಾರಿ