Advertisement

ಅಮೆರಿಕ- ಭಾರತ ಮತ್ತಷ್ಟು ನಿಕಟ ; ಇಂದು ದಿಲ್ಲಿಯಲ್ಲಿ 2+2 ಮಾತುಕತೆ

12:49 AM Oct 27, 2020 | mahesh |

ಅಮೆರಿಕ ಮತ್ತು ಭಾರತ ನಡುವಿನ ಬಹುನಿರೀಕ್ಷಿತ ಮೂರನೇ 2+2 ಮಾತುಕತೆ ಮಂಗಳವಾರ ಹೊಸದಿಲ್ಲಿÉಯಲ್ಲಿ ನಡೆಯಲಿದೆ. ಅದಕ್ಕಾಗಿ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪ್ಯು ಮತ್ತು ರಕ್ಷಣ ಸಚಿವ ಮಾರ್ಕ್‌ ಎಸ್ಪರ್‌ ಈಗಾಗಲೇ ಆಗಮಿಸಿದ್ದಾರೆ. ಹಲವು ವಿಚಾರಗಳ ಬಗ್ಗೆ 2 ದೇಶಗಳ ಸಚಿವರು ಸಮಗ್ರ ಮಾತುಕತೆ ನಡೆಸುವ ಸಾಧ್ಯತೆ ಇದೆ

Advertisement

ಅಜೆಂಡಾದಲ್ಲಿ ಏನಿದೆ?
ಭಾರತ ಮತ್ತು ಚೀನ ನಡುವೆ ಗಡಿ ತಂಟೆ ಇರುವ ಸಂದರ್ಭದಲ್ಲಿಯೇ ಮಾತುಕತೆ ನಡೆಯುತ್ತಿದೆ. ಈ ಅಂಶವೂ ಪ್ರಸ್ತಾಪವಾಗುವ ಸಾಧ್ಯತೆ ಪ್ರಾದೇಶಿಕ ಭದ್ರತಾ ಸಹಕಾರ, ರಕ್ಷಣ ಮಾಹಿತಿ ವಿನಿಮಯ, ರಕ್ಷಣ ಕ್ಷೇತ್ರದಲ್ಲಿ ಹೂಡಿಕೆ, ಸೇನೆಗಳ ನಡುವಿನ ಮಾತುಕತೆ ಬಹು ನಿರೀಕ್ಷಿತ ರಕ್ಷಣ ಕ್ಷೇತ್ರದಲ್ಲಿ ವಿಸ್ತೃತ ಸಹಕಾರದ ನಿಟ್ಟಿನಲ್ಲಿ ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೊ- ಆಪರೇಷನ್‌ ಎಗ್ರಿಮೆಂಟ್‌ಗೆ ಸಹಿ ಸಾಧ್ಯತೆ

ಏನಿದು “2+2 ಮಾತುಕತೆ’?
– ವಿದೇಶಾಂಗ ಮಾತುಕತೆಗಳಲ್ಲಿ ಬಳಕೆ ಮಾಡುವ ಪದ ಪ್ರಯೋಗ.
– ಯಾವುದೇ 2 ದೇಶಗಳ ವಿದೇಶಾಂಗ ಮತ್ತು ರಕ್ಷಣ ಸಚಿವರು ಒಟ್ಟಿಗೇ ಕುಳಿತು ನಡೆಸುವ ಮಾತುಕತೆ.
– ಸರಳವಾಗಿ ಹೇಳುವುದಿದ್ದರೆ 2 ದೇಶಗಳ ನಡುವಿನ ವ್ಯೂಹಾತ್ಮಕ, ಭದ್ರತೆ ಮತ್ತು ಜಗತ್ತಿನ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ.
– ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಇದು ಸಹಕಾರಿ.

ಭಾಗವಹಿಸುವವರು ಯಾರು?
ಭಾರತ- ಎಸ್‌.ಜೈಶಂಕರ್‌-ವಿದೇಶಾಂಗ ಸಚಿವ, ರಾಜನಾಥ್‌ ಸಿಂಗ್‌-ರಕ್ಷಣ ಸಚಿವ
ಅಮೆರಿಕ- ಮೈಕ್‌ ಪೊಂಪ್ಯು- ವಿದೇಶಾಂಗ ಸಚಿವ,ಮಾರ್ಕ್‌ ಎಸ್ಪರ್‌- ರಕ್ಷಣ ಸಚಿವ

ಮೊದಲು ನಡೆದದ್ದು ಯಾವಾಗ?
ಎರಡೂ ದೇಶಗಳ ನಡುವೆ 2018ರ ಸೆಪ್ಟೆಂಬರ್‌ 2+2 ಮಾತುಕತೆ ಹೊಸದಿಲ್ಲಿಯಲ್ಲಿ ನಡೆದಿತ್ತು.
ಎರಡು ದೇಶಗಳ ನಡುವೆ ಮಂಗಳವಾರ ನಡೆಯಲಿರುವುದು ಮೂರನೇ ಮಾತುಕತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next