Advertisement

ಅಫ್ಘಾನಿಸ್ತಾನದಲ್ಲಿ ಸೈನಿಕರ ಸಂಖ್ಯೆ ಇಳಿಸಲು ಸಮ್ಮತಿ

01:52 AM Jun 20, 2020 | Hari Prasad |

ವಾಷಿಂಗ್ಟನ್‌: ಅಫ್ಘಾನಿಸ್ತಾನದಲ್ಲಿರುವ ತಮ್ಮ ಸೈನಿಕರ ಸಂಖ್ಯೆಯನ್ನು 8600ಕ್ಕೆ ಇಳಿಸಲು ಅಮೆರಿಕ ನಿರ್ಧರಿಸಿದೆ.

Advertisement

ಫೆಬ್ರವರಿಯಲ್ಲಿ ತಾಲಿಬಾನ್‌ ಜತೆಗೆ ನಡೆಸಿದ್ದ ಶಾಂತಿ ಒಪ್ಪಂದದ ಪ್ರಕಾರವಾಗಿ ಅಮೆರಿಕ ಈ ನಿರ್ಣಯಕ್ಕೆ ಬಂದಿದೆ.

‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಫ್ಘಾನಿಸ್ತಾನದಲ್ಲಿನ ಸೇನೆಯನ್ನು ಹಿಂತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಫೆಬ್ರ­ವರಿಯ ಒಪ್ಪಂದದ ಪ್ರಕಾರವಾಗಿ 135 ದಿನಗಳಲ್ಲಿ ಸೈನಿಕರ ಸಂಖ್ಯೆಯನ್ನು 8600ಕ್ಕೆ ಇಳಿಸಲಾಗುತ್ತದೆ. ಜುಲೈ ಒಳಗೆ ಇದು ಸಂಪೂರ್ಣ ಸಾಧ್ಯವಾಗಬಹುದು’ ಎಂದು ನೌಕಾಪಡೆ ಜನರಲ್‌ ಫ್ರಾಂಕ್‌ ಮೆಕೆಂಝಿ ಸ್ಪಷ್ಟಪಡಿಸಿದ್ದಾರೆ.

ಸುಮಾರು 2 ದಶಕಗಳಿಂದ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಅಮೆರಿಕನ್‌ ಸೈನಿಕರು ಅಫ್ಘಾನಿಸ್ತಾನದ ಯುದ್ಧದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಅಫ್ಘನ್‌ನಲ್ಲಿ 12 ಸಾವಿರ ಅಮೆರಿಕನ್‌ ಯೋಧರು ನಿಯೋಜನೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next