ಈ ಬಗ್ಗೆ ಸ್ವತಃ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೋಂಪ್ಯೋ ಮಾಹಿತಿ ನೀಡಿದ್ದಾರೆ. ಇದರಿಂದಾಗಿ, ಭಾರತದಲ್ಲಿ ತೈಲ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗುವ ಸಾಧ್ಯತೆಯಿದೆ. ವಿನಾಯ್ತಿ ಪಡೆದಿರುವ ಎಲ್ಲ ದೇಶಗಳೂ ಏಷ್ಯಾ ಖಂಡದ ರಾಷ್ಟ್ರಗಳಾಗಿದ್ದು, ಇರಾನ್‌ನಿಂದ ಹೇರಳ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ. ಇರಾನ್ ಮೇಲೆ ನಿರ್ಬಂಧ ಹೇರಿದ ಬಳಿಕ ಈ ದೇಶಗಳು ಅಲ್ಲಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ತಗ್ಗಿಸಿದ್ದರಿಂದ ಈ ವಿನಾಯ್ತಿ ನೀಡಿದ್ದಾಗಿ ಮೈಕ್ ತಿಳಿಸಿದ್ದಾರೆ. ಜತೆಗೆ, ರಾಷ್ಟ್ರಗಳ ಪಟ್ಟಿಯನ್ನು ಸೋಮವಾರ ಅಧ್ಯಕ್ಷ ಟ್ರಂಪ್ ಬಿಡುಗಡೆ ಮಾಡಲಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
Advertisement