Advertisement

ಪ್ರತಿಸ್ಪರ್ಧಿಗಳ ಹತ್ತಿಕ್ಕಿದ ಆರೋಪ: ಫೇಸ್‌ಬುಕ್‌ ವಿರುದ್ಧ 48 ಪ್ರಾಂತ್ಯಗಳಿಂದ ಕೇಸು

07:26 PM Dec 10, 2020 | sudhir |

ವಾಷಿಂಗ್ಟನ್‌: ಸ್ಪರ್ಧಾತ್ಮಕತೆ ವಿರೋಧಿ ನಡೆ ಪ್ರದರ್ಶಿಸಿದ ಆರೋಪಕ್ಕೆ ಸಂಬಂಧಿಸಿ ಫೇಸ್‌ಬುಕ್‌ ವಿರುದ್ಧ ಅಮೆರಿಕ ಸರ್ಕಾರ ಹಾಗೂ 48 ಪ್ರಾಂತ್ಯಗಳು ಪ್ರಕರಣ ದಾಖಲಿಸಿವೆ. ಮಾರುಕಟ್ಟೆಯಲ್ಲಿರುವ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಏಕಸ್ವಾಮ್ಯ ಸಾಧಿಸಲು ಯತ್ನಿಸಿದ ಹಾಗೂ ಸಣ್ಣ ಪುಟ್ಟ ಕಂಪನಿಗಳನ್ನು ಹತ್ತಿಕ್ಕಿದ ಆರೋಪವನ್ನು ಫೇಸ್‌ಬುಕ್‌ ಮೇಲೆ ಹೊರಿಸಲಾಗಿದೆ.

Advertisement

ಫೆಡರಲ್‌ ಟ್ರೇಡ್‌ ಕಮಿಷನ್‌(ಎಫ್ಟಿಸಿ) ಮತ್ತು 48 ಪ್ರಾಂತ್ಯಗಳ ಅಟಾರ್ನಿ ಜನರಲ್‌ಗ‌ಳು ಕಂಪನಿ ವಿರುದ್ಧ ಕಾನೂನು ಸಮರ ಆರಂಭಿಸುತ್ತಲೇ, ಫೇಸ್‌ಬುಕ್‌ ಷೇರುಗಳು ಭಾರೀ ಪತನ ಕಂಡಿವೆ.

2012ರಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ಇನ್‌ಸ್ಟಾ ಗ್ರಾಂ ಅನ್ನು ಖರೀದಿಸಿ, 2014ರಲ್ಲಿ ವಾಟ್ಸ್‌ಆ್ಯಪ್‌ ಅನ್ನೂ ಫೇಸ್‌ಬುಕ್‌ ಸ್ವಾಧೀನಪಡಿಸಿಕೊಂಡಿತು. ಜತೆಗೆ ಸಾಫ್ಟ್ವೇರ್‌ ಡೆವಲಪರ್‌ಗಳಿಗೆ ಸ್ಪರ್ಧಾತ್ಮಕತೆ ವಿರೋಧಿ ಷರತ್ತುಗಳನ್ನೂ ವಿಧಿಸತೊಡಗಿತು. ಫೇಸ್‌ಬುಕ್‌ನ ಈ ಎಲ್ಲ ನಡೆಗಳೂ ಏಕಸ್ವಾಮ್ಯವನ್ನು ಸಾಧಿಸಲು ನಡೆಸಿದ ವ್ಯವಸ್ಥಿಕ ಕಾರ್ಯತಂತ್ರ ಎಂದು ಅರ್ಜಿಗಳಲ್ಲಿ ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next