Advertisement

ಪಾಕಿಗೆ ಅಮೆರಿಕದ 25.50 ಕೋಟಿ ಡಾಲರ್‌ ಶರ್ತಬದ್ಧ ಮಿಲಿಟರಿ ನೆರವು

11:56 AM Aug 31, 2017 | udayavani editorial |

ವಾಷಿಂಗ್ಟನ್‌ : ಪಾಕಿಸ್ಥಾನಕ್ಕೆ ಟ್ರಂಪ್‌ ಆಡಳಿತ 25.50 ಕೋಟಿ ಡಾಲರ್‌ಗಳ ಶರ್ತಬದ್ಧ ನೆರವನ್ನು ನೀಡಿದೆ. ಆದರೆ ಪಾಕ್‌ ಸರಕಾರ ತನ್ನ ನೆಲದಿಂದ ಕಾರ್ಯಾಚರಿಸುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕದೆ ಈ ನೆರವನ್ನು ಪಡೆಯುವಂತಿಲ್ಲ ಎಂದು ಟ್ರಂಪ್‌ ಆಡಳಿತೆ ಅಮೆರಿಕದ ಸಂಸತ್ತಿಗೆ ತಿಳಿಸಿದೆ. 

Advertisement

“ಅಫ್ಘಾನಿಸ್ಥಾನದಲ್ಲಿ ಅಮೆರಿಕನ್ನರನ್ನು ಕೊಲ್ಲುವ ಭಯೋತ್ಪಾದಕರಿಗೆ ಪಾಕಿಸ್ಥಾನ ಅಶ್ರಯ ಮಾತ್ರವಲ್ಲದೆ ಸರ್ವ ರೀತಿಯ ನೆರವನ್ನು ಕೊಡುತ್ತಿದೆ. ಪಾಕಿಸ್ಥಾನ ಇದೇ ರೀತಿ ತನ್ನ ನೆಲದಿಂದ ಕಾರ್ಯಾಚರಿಸುವ ಉಗ್ರರಿಗೆ ನೆರವು ಕೊಡುವುದನ್ನು ನಿಲ್ಲಿಸದಿದ್ದರೆ ಅದು ಬಹಳಷ್ಟನ್ನು ಕಳೆದುಕೊಳ್ಳಬೇಕಾದೀತು’ ಎಂಬ ಕಟು ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ವಾರದ ಬಳಿಕ ಪಾಕಿಗೆ 25.50 ಕೋಟಿ ಡಾಲರ್‌ಗಳ ಶರ್ತಬದ್ಧ ಮಿಲಿಟರಿ ನೆರವನ್ನು ಅಮೆರಿಕ ಪ್ರಕಟಿಸಿದೆ.

ಪಾಕಿಸ್ಥಾನ – ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಪಾಕ್‌ ಭಯೋತ್ಪಾದನೆ ಪ್ರವರ್ತನೆಯ ನಿಮಿತ್ತ ತೀವ್ರವಾಗಿ ಹದಗೆಟ್ಟಿರುವ  ಈ ಸಂದರ್ಭದಲ್ಲೇ ಅಮೆರಿಕ ಮಂಜೂರು ಮಾಡಿರುವ ಶರ್ತಬದ್ಧ ಮಿಲಿಟರಿ ನೆರವು ಪಾಕಿಸ್ಥಾನವನ್ನು ಸರಿದಾರಿಗೆ ತರುವ ಪ್ರಯತ್ನವಾಗಿದೆ ಎಂದು ತಿಳಿಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next