Advertisement

US; ಕಮಲಾ ಹ್ಯಾರಿಸ್‌ಗೆ ಕೊನೆಗೂ ಮಾಜಿ ಅಧ್ಯಕ್ಷ ಒಬಾಮಾ ಬೆಂಬಲ?

12:31 AM Jul 26, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಡೆಮಾಕ್ರಾಟಿಕ್‌ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಲ್ಲೇ, ಅವರಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಬೈಡೆನ್‌ಗಿಂತ ಕಮಲಾರನ್ನು ಸೋಲಿಸುವುದು ಸುಲಭ ಎಂದು ಟ್ರಂಪ್‌ ಹೇಳಿಕೆ ನೀಡಿದ್ದರು. ಹೀಗಾಗಿ ಒಬಾಮಾ, ಕಮಲಾರಿಗೆ ಬೆಂಬಲ ನೀಡಲು ಮುಂದಾಗಿರಲಿಲ್ಲ. ಇದರ ಹೊರ ತಾಗಿಯೂ ಡೆಮಾಕ್ರಾಟಿಕ್‌ ಪಕ್ಷದ ನಾಯಕರ ಜತೆಗೆ ಬಿರುಸಿನ ಸಮಾಲೋಚನೆ ನಡೆಸಿದ ಬಳಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡಲು ಒಬಾಮಾ ತೀರ್ಮಾನಿಸಿದರು ಎನ್ನಲಾಗಿದೆ. ಇದೇ ವೇಳೆ ಜೋ ಬೈಡೆನ್‌ ಮಾತನಾಡಿ “ಮುಂದಿನ ಪೀಳಿಗೆಗೆ ಜವಾ ಬ್ದಾರಿಯನ್ನು ಹಸ್ತಾಂತರಿಸುವುದಕ್ಕಾಗಿ ಚುನಾವಣೆ ಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next