Advertisement

ಕೋವಿಡ್-19ಗೆ ಒಂದೇ ದಿನ 2,108 ಜನರು ಬಲಿ: ದಾಖಲೆ ಬರೆದ ಅಮೆರಿಕಾ

09:17 AM Apr 12, 2020 | Mithun PG |

ವಾಷಿಂಗ್ಟನ್: ಕೋವಿಡ್-19 ಹೊಡೆತಕ್ಕೆ ಅಮೆರಿಕಾ ತತ್ತರಿಸಿ ಹೋಗಿದ್ದು, ಒಂದೇ ದಿನ 2 ಸಾವಿರ ಜನ ಮೃತಪಟ್ಟು ದಾಖಲೆ ಬರೆದಿದೆ. ಜಗತ್ತಿನಾದ್ಯಂತ ಪಸರಿಸಿರುವ ಈ ಮಹಾಮಾರಿಗೆ ವಿಶ್ವದ ದೊಡ್ಡಣ್ಣನೇ ನಡುಗಿ ಹೋಗಿದ್ದು ಶುಕ್ರತವಾರ 2,108 ಜನ ಬಲಿಯಾಗಿಯಾಗಿದ್ದಾರೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ತನ್ನ ವರದಿಯಲ್ಲಿ ತಿಳಿಸಿದೆ.

Advertisement

ಸೋಂಕಿತರ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡುಬಂದಿದ್ದು, 5 ಲಕ್ಷದ ಗಡಿ ದಾಟಿದೆ. 24 ಗಂಟೆಗಳ ಅವಧಿಯಲ್ಲಿ 35,089 ಜನರಿಗೆ ವೈರಾಣು ತಗುಲಿರುವುದು ದೃಢಪಟ್ಟಿದೆ.

ಕೋವಿಡ್19 ವೈರಸ್ ಕೇಂದ್ರಬಿಂದುವಾದ ಚೀನಾದಲ್ಲಿ ಹೊಸದಾಗಿ 46  ಪ್ರಕರಣಗಳು ವರದಿಯಾಗಿದೆ.  ಮಾತ್ರವಲ್ಲದೆ 3 ಜನರು ಮೃತಪ್ಟಿರುವುದು ವರದಿಯಾಗಿದೆ.

ಮತ್ತೊಂದೆಡೆ ಬ್ರೆಜಿಲ್ ನಲ್ಲೂ ಈ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು,  1000 ಜನರು ಶುಕ್ರವಾರ ಮೃತಪಟ್ಟಿದ್ದಾರೆ.  ವಿಶ್ವದಾದ್ಯಂತ ಈ ವೈರಸ್ 1,02,734 ಜನರನ್ನು ಬಲಿ ತೆಗೆದುಕೊಂಡಿದೆ.  ಸೋಂಕಿತರ ಪ್ರಮಾಣ ಕೂಡ 16,99,628 ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next