ಮುಂಬಯಿ : ಅಮೆರಿಕ ಫೆಡರಲ್ ರಿಸರ್ವ್ ಬ್ಯಾಂಕ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಸದ್ಯದಲ್ಲೇ ದರ ಕಡಿತ ಕೈಗೊಳ್ಳುವ ಸುಳಿವು ನೀಡಿದುದನ್ನುಅನಸರಿಸಿ ಜಾಗತಿಕ ಶೇರು ಮಾರುಕಟ್ಟೆಗಳು ಗರಿಗೆದರಿದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 266.07 ಅಂಕಗಳ ಜಿಗಿತದೊಂದಿಗೆ 38,823.11ಅಂಕಗಳ ಮಟ್ಟದಲ್ಲಿ ಇಂದು ಗುರುವಾರದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 84 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಟನ್ನು 11,582.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಆಗಿ ಮೂಡಿ ಬಂದ ಹೀರೋ ಮೋಟೋ ಕಾರ್ಪ್ ಶೇ.4.46ರ ಭರ್ಜರಿ ಏರಿಕೆಯನ್ನು ದಾಖಲಿಸಿತು. ಉಳಿದಂತೆ ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟರ್, ವೇದಾಂತ, ಎಸ್‌ಬಿಐ, ಮಹೀಂದ್ರ, ಸನ್ ಫಾರ್ಮಾ, ಟಾಟಾ ಸ್ಟೀಲ್, ಎಚ್ ಡಿ ಎಫ್ ಸಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಶೇರು ಶೇ.3.63ರ ಏರಿಕೆಯನ್ನು ಕಂಡವು.
ವ್ಯತಿರಿಕ್ತವಾಗಿ ಟೆಕ್ ಮಹೀಂದ್ರ, ಎಸ್‌ಬ್ಯಾಂಕ್, ಟಿಸಿಎಸ್, ಲಾರ್ಸನ್, ಎಕ್ಸಿಸ್ ಬ್ಯಾಂಕ್, ಎನ್ ಟಿ ಪಿಸಿ ಶೇರು ಶೇ.1.27ರ ನಷ್ಟ ಅನುಭವಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,956 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,243 ಶೇರುಗಳು ಮುನ್ನಡೆ ಸಾಧಿಸಿದವು; 1,195 ಶೇರುಗಳು ಹಿನ್ನಡೆಗೆ ಗುರಿಯಾದವು; 158 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.