ವಾಷಿಂಗ್ಟನ್: ಅಮೆರಿಕದ 70 ವರ್ಷದ ವೃದ್ಧರೊಬ್ಬರು ಕೋವಿಡ್ 19 ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ 62 ದಿನಗಳ ನಂತರ ಗುಣಮುಖರಾಗಿದ್ದರು. ಆದರೇ ಆಸ್ಪತ್ರೆಯವರು 1.1 ಮಿಲಿಯನ್ ಡಾಲರ್ (8,35,52,700 ರೂ. ) ನೀಡಿದ ಬಿಲ್ ನೋಡಿ ಕುಸಿದ ಬಿದ್ದ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮೈಕೆಲ್ ಫ್ಲೋರ್ ಎಂಬ ವೃದ್ಧ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಮಾರ್ಚ್ 4 ರಂದು ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು ಮತ್ತು 62 ದಿನಗಳ ಕಾಲ ನಿಗಾ ಘಟಕದಲ್ಲಿ ಇದ್ದರು. ಒಂದು ಹಂತದಲ್ಲಿ ಸಾವಿನ ಸಮೀಪ ಬಂದು ಆನಂತರದಲ್ಲಿ ಆಶ್ಚರ್ಯಕರವೆಂಬಂತೆ ಚೇತರಿಸಿಕೊಂಡಿದ್ದರು.
ಮೇ 5 ರಂದು ಅವರು ನಿರ್ಗಮಿಸುವಾಗ 181 ಪುಟಗಳಿದ್ದ ಆಸ್ಪತ್ರಾ ವೆಚ್ಚ (ಬಿಲ್) ನೀಡಲಾಗಿತ್ತು. ಇದರಲ್ಲಿ ನಮೂದಿಸಲಾಗಿರುವ ಮೊತ್ತ ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಬಿಲ್ ಪ್ರಕಾರ ಅವರು ಬರೋಬ್ಬರಿ 1.1 ಮಿಲಿಯನ್ ಡಾಲರ್ ಗಳನ್ನು ಪಾವತಿಸಬೇಕಾಗಿತ್ತು.
ತೀವ್ರ ನಿಗಾ ಘಟಕದ ಕೊಠಡಿಗೆ 9,736 ಡಾಲರ್, ವೆಂಟಿಲೇಟರ್ ಗೆ 82,000 ಡಾಲರ್, ಕೊಠಡಿ ವೆಚ್ಚ 409,00 ಡಾಲರ್ ಸೇರಿದಂತೆ ಇತರ ಬಿಲ್ ನೀಡಲಾಗಿತ್ತು.
ಆದರೂ ಮೈಕಲ್ ಪ್ಲೋರ್, ಸರ್ಕಾರಿ ವಿಮಾ ಕಾರ್ಯಕ್ರಮವಾದ ಮೆಡಿಕೇರ್ ನಲ್ಲಿ ನೋಂದಾಯಿಸಿಕೊಂಡಿದ್ದರಿಂದ ಸರ್ಕಾರವೇ ಈ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ ಎಂದು ಟೈಮ್ಸ್ ವರದಿ ತಿಳಿಸಿದೆ.