Advertisement

ಅಲ್‌ ಕಾಯಿದಾ ಬೆಂಬಲಿಸಿದ ಅಮೆರಿಕನ್‌ ಪ್ರಜೆಗೆ 45 ವರ್ಷ ಜೈಲು

11:45 AM Mar 14, 2018 | Team Udayavani |

ವಾಷಿಂಗ್ಟನ್‌ : ಪಾಕಿಸ್ಥಾನದ ಬುಡಕಟ್ಟು ಪ್ರದೇಶಗಳಲ್ಲಿ  ಅಲ್‌ ಕಾಯಿದಾ ದಿಂದ ಉಗ್ರ ತರಬೇತಿ ಪಡೆದು ಅಮೆರಿಕನ್ನರನ್ನು ಕೊಲ್ಲಲು ಸಂಚು ನಡೆಸುತ್ತಿದ್ದ ಮತ್ತು ಜಾಗತಿಕ ಭಯೋತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುತ್ತಿದ್ದ ಅಮೆರಿಕನ್‌ ಪ್ರಜೆಗೆ 45 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ. 

Advertisement

32 ವರ್ಷ ಪ್ರಾಯದ ಮುಹಾನದ್‌ ಮಹಮೂದ್‌ ಅಲ್‌ ಫಾರೇಕ್‌ ಎಂಬಾತನು ಸಾಗರೋತ್ತರ ಪ್ರವಾಸ ಕೈಗೊಂಡು,ಅಲ್‌ ಕಾಯಿದಾ ಸಂಘಟನೆಯನ್ನು ಸೇರಿಕೊಂಡು ಉಗ್ರ ತರಬೇತಿ ಪಡೆದಿದ್ದ. 

2009ರಲ್ಲಿ ಅಫ್ಘಾನಿಸ್ಥಾನದಲ್ಲಿ ಅಮೆರಕದ ಸೇನಾ ಘಟಕವೊಂದ ಮೇಲೆ ಬಾಂಬ್‌ ದಾಳಿ ಸೇರಿದಂತೆ ಅಲ್ಲಿರುವ ಅಮೆರಿಕನ್ನರನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್‌ ಜಾನ್‌ ಸಿ ಡಿಮರ್ಸ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next