ಸಿಯೋಲ್: ಜಗತ್ತಿನಲ್ಲಿ ಅತಿಹೆಚ್ಚು ಕಾರ್ಬನ್ ಹೊರಸೂಸುವ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ, ಹವಾಮಾನ ವೈಪರೀತ್ಯ ಬಿಕ್ಕಟ್ಟಿನ ತುರ್ತು ಕಡಿವಾಣಕ್ಕೆ ಪರಸ್ಪರ ಸಹಕರಿಸಲು ಸಮ್ಮತಿ ಸೂಚಿಸಿವೆ.
ಹವಾಮಾನ ವೈಪರೀತ್ಯ ನಿಯಂತ್ರಣ ಕುರಿತ ಜಾಗತಿಕ ವರ್ಚುವಲ್ ಶೃಂಗಕ್ಕೂ ಕೆಲವೇ ದಿನಗಳ ಮುನ್ನಾ ಈ ಬೆಳವಣಿಗೆ ನಡೆದಿದೆ. ಅಮೆರಿಕದ ವಿಶೇಷ ನಿಯೋಗದ ಜಾನ್ ಕೆರ್ರಿ ಮತ್ತು ಚೀನಾದ ಕ್ಸೀ ಝೆನ್ಹುವಾ ಕಳೆದ ವಾರ ಶಾಂಘೈನಲ್ಲಿ ನಡೆಸಿದ ಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.
ವಾಯುಮಾಲಿನ್ಯದಲ್ಲಿ ಚೀನಾ ನಂ.1 ರಾಷ್ಟ್ರವಾದರೆ, ಅದರ ನಂತರ ಅಮೆರಿಕ ಸ್ಥಾನ ಪಡೆದಿದೆ. ಭೂಮಿ ಮೇಲಿನ ಅರ್ಧದಷ್ಟು ಮಾಲಿನ್ಯಕ್ಕೆ ಇವೆರಡು ರಾಷ್ಟ್ರಗಳ ಕೊಡುಗೆಯೇ ಅಪಾರ.
ಭವಿಷ್ಯದಲ್ಲಿ ಯಾವ ಹೆಜ್ಜೆ ಇಡಬೇಕೆಂಬ ಕುರಿತು ನಿರ್ಣಯ ಕೈಗೊಂಡಿರುವುದಾಗಿ ಉಭಯ ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿವೆ.
ಇದನ್ನೂ ಓದಿ :ಕೋವಿಡ್ ರಣಕೇಕೆ : ರಾಜ್ಯದಲ್ಲಿಂದು 19067 ಮಂದಿಗೆ ಸೋಂಕು, 81 ಸಾವು!