ವಾಷಿಂಗ್ಟನ್: ಚೀನದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಉತ್ಪನ್ನಗಳ ಆಮದನ್ನು ನಿಷೇ ಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹಿ ಹಾಕಿದ್ದಾರೆ.
ಆ ಪ್ರಾಂತ್ಯದಲ್ಲಿ ಉಯ್ಘರ್ ಮುಸ್ಲಿಮ್ ಸಮುದಾಯಕ್ಕೆ ಕಿರುಕುಳ ನೀಡುತ್ತಿರುವ ಪ್ರಕರಣಗಳ ಹಿನ್ನೆಲೆ ಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿದೆ.
“ಉಯ್ಘರ್ ಫೋರ್ಸಡ್ ಲೇಬರ್ ಪ್ರಿವೆನ್ಶನ್ ಆ್ಯಕ್ಟ್’ ಪ್ರಕಾರ ಕ್ಸಿನ್‌ಜಿಯಾಂಗ್‌ನಿಂದ ಆಮದು ಮಾಡಿಕೊಳ್ಳುವ ಉತ್ಪನ್ನ ಬಲ ವಂತದ ಕಾರ್ಮಿಕರಿಂದ ತಯಾರಿಸಿದ್ದಲ್ಲ ಎಂದು ಸಂಸ್ಥೆಗಳು ಪ್ರಮಾಣೀಕರಿಸುವುದಾ ದರೆ ಮಾತ್ರ ಅದನ್ನು ಅವರು ಆಮದು ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಡಿ.25ರಂದು ಗುರುಪುರಬ್ ಉತ್ಸವವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಈ ಬಗ್ಗೆ ಚೀನ ಪ್ರತಿಕ್ರಿಯಿಸಿದ್ದು, “ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಜನರ ಬದುಕಿನ ಸತ್ಯಾಸತ್ಯತೆ ಅರಿವಿಲ್ಲದೆ ದುರುದ್ದೇಶಪೂರ್ವಕವಾಗಿ ನಿಂದಿಸಲಾಗುತ್ತಿದೆ. ಈ ಕಾಯ್ದೆಯು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿ ಸುತ್ತದೆ. ಚೀನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ’ ಎಂದು ವಿದೇಶಾಂಗ ಸಚಿವಾಲಯ ದೂರಿದೆ.