Advertisement

US: ಹೌತಿ ಬಂಡುಕೋರರ ಮೇಲೆ ಅಮೆರಿಕ ದಾಳಿ: ಐವರ ಸಾವು

12:39 AM Jan 13, 2024 | Team Udayavani |

ದುಬೈ: ಇತ್ತೀಚೆಗೆ ಕೆಂಪುಸಮುದ್ರದಲ್ಲಿ ಸಂಚರಿ ಸುವ ಸರಕು ಹಡಗುಗಳ ಮೇಲೆ ದಾಳಿ ಮಾಡು ತ್ತಿದ್ದ ಇರಾನ್‌ ಬೆಂಬಲಿತ ಹೌತಿ ಬಂಡುಕೋರರ ಮೇಲೆ; ಅಮೆರಿಕ ಸೇನೆ ತೀವ್ರ ದಾಳಿ ನಡೆಸಿದೆ. ಶುಕ್ರವಾರ ಯೆಮೆನ್‌ನಲ್ಲಿರುವ 12 ಹೌತಿ ನೆಲೆಗಳ ಮೇಲೆ ಅಮೆರಿಕ ಸೇನೆ ಬಾಂಬ್‌ ದಾಳಿ ನಡೆಸಿದೆ.

Advertisement

ಇದರಲ್ಲಿ ಐವರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದಾರೆ ಎಂದು ಸ್ವತಃ ಹೌತಿ ಬಂಡುಕೋರ ಸಂಘಟನೆಯೇ ಮಾಹಿತಿ ನೀಡಿದೆ. ಅಣ್ವಸ್ತ್ರ ತಯಾರಿಸಲು ಹೊರಟಿರುವ ಇರಾನ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದ ಸಿಟ್ಟಾಗಿ ರುವ ಇರಾನ್‌, ಹೌತಿ ಉಗ್ರರನ್ನು ಛೂಬಿಟ್ಟು ಅಮೆರಿಕ, ಇಸ್ರೇಲ್‌ ಹಡಗುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next