Advertisement

ಕಾನ್‌ ಚಿತ್ರೋತ್ಸವದಲ್ಲಿ ಊರ್ವಶಿ ಮಿಂಚು

03:52 PM May 22, 2023 | Team Udayavani |

2023ನೇ ಸಾಲಿನ 76ನೇ ಕಾನ್‌ ಚಿತ್ರೋತ್ಸವ ಫ್ರಾನ್ಸ್‌ನಲ್ಲಿ ನಡೆಯುತ್ತಿದ್ದು, ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವುದು ಕಾನ್‌ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಜಗತ್ತಿನ ವಿವಿಧ ಚಿತ್ರರಂಗಗಳ ನೂರಾರು ಸ್ಟಾರ್ ಗಮನ ಸೆಳೆಯುವ ಉಡುಗೆಗಳನ್ನು ತೊಟ್ಟು ನೆರೆದಿದ್ದವರಿಗೆ ಪೋಸ್‌ ನೀಡುತ್ತಿದ್ದಾರೆ.

Advertisement

ಅದರಂತೆಯೇ ಈ ಬಾರಿ ಕನ್ನಡದ “ಐರಾವತ’ ಸಿನಿಮಾದ ನಾಯಕಿ, ಬಹುಭಾಷಾ ನಟಿ ಊರ್ವಶಿ ರೌಟೇಲಾ ಕೂಡ ಕಾನ್‌ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡು ಮಿಂಚು ಹರಿಸಿದ್ದಾರೆ. ಕಾನ್‌ ಫೆಸ್ಟಿವಲ್‌ನಲ್ಲಿ ಪಿಂಕ್‌ ಬಣ್ಣದ ಗೌನ್‌ನಲ್ಲಿ ವಿಭಿನ್ನ ಶೈಲಿಯ ನೆಕ್ಪೀಸ್‌ ಧರಿಸಿ ಊರ್ವಶಿ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ಊರ್ವಶಿ ರೌಟೇಲಾ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇನ್ನೂ “ಕಾಂತಾರ 2′ ಸಿನಿಮಾದಲ್ಲಿ ಕೂಡ ಊರ್ವಶಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next