Advertisement

ಉರ್ವ ಚಿಲಿಂಬಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ: ಇಂದಿನಿಂದ ಶ್ರೀ ರಾಮನವಮಿ ಉತ್ಸವ

12:35 AM Mar 29, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸಾಯಿಬಾಬಾ ಮಂದಿರ ಎಂಬ ಹೆಗ್ಗಳಿಕೆ ಹೊಂದಿರುವ ಉರ್ವ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ಮಾ. 29ರಂದು ಆರಂಭಗೊಳ್ಳಲಿದೆ.

Advertisement

ಮಾ. 29ರಂದು ಬೆಳಗ್ಗೆ 6.05ರಿಂದ ಕಾಕಡ ಆರತಿಯೊಂದಿಗೆ ಶ್ರೀ ರಾಮನವಮಿಯ ಪೂಜಾ ವಿಧಿವಿಧಾನಗಳು ಆರಂಭಗೊಳ್ಳಲಿವೆ. ಬಳಿಕ ಗಣಪತಿ ಹೋಮ, ಪೂರ್ಣಾಹುತಿ, ಧ್ವಜಾರೋಹಣ, ಅಷ್ಟೋತ್ತರ ಸಹಿತ ಮಂಗಳಾರತಿ, ವಿಷ್ಣು ಸಹಸ್ರನಾಮ, ಭಜನೆ, ಶ್ರೀ ದೇವಿ ಮಹಾತೆ¾ ಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಧೂಪಾರತಿ, ಅಷ್ಟಾವಧಾನ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಮಾ. 30ರಂದು ವಿಷ್ಣು ಸಹಸ್ರನಾಮ, ದೀಪಾರಾಧನೆ ನಡೆಯಲಿದೆ. ಬಳಿಕ ರಾಮತಾರಕ ಯಾಗ ಹಾಗೂ ಧನ್ವಂತರಿ ಹವನ, ಭಜನೆ, ಪಲ್ಲಕಿ ಉತ್ಸವ, ಶ್ರೀ ಸಾಯಿಬಾಬಾ ಅವರ ನಗರ ಪ್ರದಕ್ಷಿಣೆ, ಅನಂತರ ಮಹಾಪೂಜೆ, ಶೇಜಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಾ. 31ರಂದು ಓಕುಳಿ, ಸಾಯಿನಾಥರಿಗೆ ಅವಭೃಥ ಸ್ನಾನ ನಡೆಯಲಿದೆ ಎಂದು ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್‌ಕುಮಾರ್‌ ದಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next