Advertisement
ಇವರ ಮನೆಯಂಗಳದಲ್ಲಿ ಗೋಣಿಚೀಲಗಳಲ್ಲಿ ಮಣ್ಣು ತುಂಬಿಸಿ ನೆಟ್ಟಿರುವ ಗುಲಾಬಿ, ಡೇಲಿಯಾ, ಸೇವಂತಿಗೆ ಸೇರಿದಂತೆ ಸಾಕಷ್ಟು ಗಿಡಗಳು ಹೂವರಳಿಸಿಕೊಂಡು ಕುಲು ನಗುತ್ತಿವೆ. ದಾಸವಾಳದ ಗಿಡವನ್ನೇ ಗೂಟವಾಗಿ ಬಳಸಿಕೊಂಡು ಬುಡದಲ್ಲಿ ನೆಟ್ಟಿರುವ ಬಸಳೆಯ ಬಳ್ಳಿಯಲ್ಲಿ ಹಚ್ಚ ಹಸಿರಾದ ಅಂಗೈಯಗಲದ ಎಲೆಗಳು ಮನ ಸೆಳೆಯುತ್ತವೆ. ಬದನೆಯ ಗಿಡ ಕಾಯಿ ಕೊಡುತ್ತಿದೆ.
Related Articles
Advertisement
ಶಾರದಮ್ಮ ಮೂರು ವರ್ಷಗಳಿಂದ ಕೇವಲ ಮೂತ್ರವನ್ನು ಕೃಷಿಗೆ ಬಳಸಿ ದೈನಂದಿನ ಬಳಕೆಗೆ ಬೇಕಾಗುವಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೇರೆ ಯಾವುದೇ ಸಾವಯವ ಗೊಬ್ಬರವಾಗಲಿ, ರಸಗೊಬ್ಬರವಾಗಲಿ ಬಳಸದಿದ್ದರೂ ಇವರ ಅಂಗಳದಲ್ಲಿ ಗಿಡಗಳು ಹಸಿರು ತುಂಬಿ ನಳನಳಿಸುತ್ತಿವೆ. ಟೊಮೆಟೊ, ಬದನೆ, ಸೋರೆ, ಬೆಂಡೆಯಂಥ ತರಕಾರಿಗಳೂ ಬೇರೆ ಪೋಷಕಾಂಶದ ಬೆಂಬಲವಿಲ್ಲದೆಯೇ ಅವರ ಕೃಷಿ ಉಪಚಾರದಿಂದ ಬೆಳೆದು ಫಲ ಕೊಡುತ್ತಿವೆ. ಹೆಚ್ಚು ಕಾಯಿಗಳು ಹಿಡಿಯುತ್ತವೆ. ಗಾತ್ರದಲ್ಲಿ ದೊಡ್ಡದೂ ಆಗಿವೆ.
ತಮ್ಮ ಯಶಸ್ವೀ ಕೃಷಿ ವಿಧಾನದ ಬಗೆಗೆ ವಿವರಿಸುವ ಶಾರದಮ್ಮ, “ಮೂತ್ರದಲ್ಲಿ ತೀರ ûಾರ ಗುಣರುವುದರಿಂದ ನೇರವಾಗಿ ಬಳಸಬಾರದು. ಒಂದು ವೇಳೆ ಮೂತ್ರವನ್ನು ನೇರವಾಗಿ ಬಳಸಿದರೆ ಅದರಿಂದ ಬೇರುಗಳು ಸುಟ್ಟು ಹೋಗಿ ಗಿಡ ಸಾಯುತ್ತದೆ. ಒಂದು ಲೀಟರ್ ಮೂತ್ರವನ್ನು ಹತ್ತು ಲೀಟರ್ ನೀರಿನೊಂದಿಗೆ ಬೆರೆಸಿ ದಿನವೂ ಪ್ರತಿಯೊಂದು ಗಿಡಕ್ಕೆ ಕಾಲು ಲೀಟರ್ ಅಳತೆಯಲ್ಲಿ ಬುಡಕ್ಕೆ ಹನಿಸಿದರೆ ಸಾಕಾಗುತ್ತದೆ.
ದ್ರವರೂಪೀ ಸತ್ವವಾಗಿರುವುದರಿಂದ ಗಿಡದ ಬೇರುಗಳು ತಕ್ಷಣವೇ ಹೀರಿಕೊಳ್ಳುತ್ತವೆ. ಗೋಣಿಚೀಲದಲ್ಲಿ ಬೆಳೆಯುತ್ತಿರುವುದರಿಂದ ಪೋಷಕಾಂಶ ವ್ಯರ್ಥವಾಗುವುದಿಲ್ಲ. ಬುಡ ತಂಪಾಗಿ ಉಳಿಯಲು ತರಗೆಲೆಗಳಿಂದ ಮುಚ್ಚಿದರೆ ಸಾಕು. ಇದರಿಂದಾಗಿ ಮೂತ್ರದಲ್ಲಿರುವ ಸತ್ತಾ$Ìಂಶಗಳು ರಸಗೊಬ್ಬರದ ಹಾಗೆ ಬಿಸಿಲಿಗೆ ಆವಿಯಾಗುವ ಭಯವಿಲ್ಲ’ ಎನ್ನುತ್ತಾರೆ.
ಈ ಪೋಷಣೆಯಲ್ಲಿ ತರಕಾರಿ ಮತ್ತು ಯಾವುದೇ ಹೂವಿನ ಗಿಡಗಳು ಪೌಷ್ಟಿಕವಾಗಿ ಬೆಳೆಯುತ್ತವೆ. ಬೇಗ ಹೂ ಬಿಡುತ್ತವೆ. ರುಚಿಯಲ್ಲಿ ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಗಳಷ್ಟೇ ಸ್ವಾದಿಷ್ಟವಾಗಿವೆ. ಇನ್ನು ಯಾವ ವಿಧದ ಕೀಟಗಳೂ ಬಾಧಿಸದ ಕಾರಣ ಕೀಟನಾಶಕದ ಅಗತ್ಯ ಬೀಳುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬುದೂ ಅವರ ವಿವರಣೆ. ಇದರಿಂದಾಗಿ ಸೊಳ್ಳೆಗಳ ಕಾಟ ಕೂಡ ಬರುವುದಿಲ್ಲವಂತೆ.
ಬಕೆಟ್‌ನಲ್ಲಿ ಮೂತ್ರವನ್ನು ಸಂಗ್ರಸಿಕೊಂಡರೆ ಬಳಕೆಗೂ ಕಷ್ಟವಿಲ್ಲ. ನೀರು ಮತ್ತು ರಂಜಕದ ಕೊರತೆ ನೀಗುವಲ್ಲಿ ಇದರ ಸಹಕಾರ ದೊಡ್ಡದು. ವ್ಯರ್ಥವಾಗುವ ಈ ಸಂಪನ್ಮೂಲದಿಂದ ಕೈತೋಟದಲ್ಲಿ ದಿನದ ಕಾಯಿಪಲ್ಲೆ ಬೆಳೆಯುವುದು ಸುಲಭ ಎನ್ನುತ್ತಾರೆ ಶಾರದಮ್ಮ.
* ಪ. ರಾಮಕೃಷ್ಣ ಶಾಸ್ತ್ರಿ