Advertisement

ಸಮಾವೇಶ ಬೇಕು, ಶಾಲೆ ಏಕೆ ಬೇಡ?

03:12 PM Mar 15, 2021 | Team Udayavani |

ತೆಲಸಂಗ: ಅವೈಜ್ಞಾನಿಕ ಕೋವಿಡ್‌ ನಿಯಮದಿಂದ ನಮ್ಮ ಮಕ್ಕಳ ಭವಿಷ್ಯ ಬರಬಾದ್‌ ಆಗುತ್ತಿದೆ ಎಂದುರಾಜ್ಯ ಸರಕಾರದ ವಿರುದ್ಧ ತೆಲಸಂಗ ಹೋಬಳಿಗ್ರಾಮಗಳ ಪಾಲಕರು ರಸ್ತೆತಡೆದು ಪ್ರತಿಭಟನೆ ನಡೆಸಿದರು.

Advertisement

ಬನ್ನೂರ ಮಾರ್ಗದ ರಸ್ತೆ ಮೇಲೆ ಕೆಲ ಹೊತ್ತುಕುಳಿತು ಪ್ರತಿಭಟನೆ ನಡೆಸಿದ ಪಾಲಕರು, ಎಲ್ಲೆಡೆ ಸಂತೆ,ಜಾತ್ರೆ ನಡೆಯುತ್ತಿರುವಾಗ ತರಗತಿ ಆರಂಭಿಸಲುನಿರ್ಬಂಧ ಏಕೆ? ಕೋವಿಡ್‌ ನಿಯಮ ಪಾಲನೆನಾಟಕ ಸಾಕು ಮಾಡಿ, ಮಕ್ಕಳ ಭವಿಷ್ಯದ ಬಗ್ಗೆಯೋಚನೆ ಮಾಡಿ. ಮಕ್ಕಳು ಮನೆಯಲ್ಲಿ ಕುಳಿತುಹಾಳಾಗುತ್ತಿವೆ. ಈ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಿ.ಸಿನಿಮಾ ಥೇಟರ್‌, ಸಂತೆ, ಜಾತ್ರೆ, ಬಸ್‌ ಮಾತ್ರವಲ್ಲದೆ ರಾಜಕಿಯ ಸಮಾವೇಶ, ಚುನಾವಣೆ ಭರ್ಜರಿಯಾಗಿ ನಡೆಸುತ್ತಿದ್ದೀರಿ.  ಎಲ್ಲೆಡೆ ಕಿಕ್ಕಿರಿದು ಜನ ಸೇರುತ್ತಿದ್ದಾರೆ. ಇವೆಲ್ಲದರಲ್ಲಿ ಪಾಲ್ಗೊಂಡ ಪಾಲಕರು ಮನೆಗೆ ಬಂದುಎಲ್ಲರೊಂದಿಗೆ ಬೆರೆಯುತ್ತಾರೆ. ಇದಕ್ಯಾವ ನಿರ್ಬಂಧಇದೆ. ಇವರಿಂದ ಮನೆಯಲ್ಲಿ ಹರಡಲಾರದ ಕೊರೊನಾಶಾಲೆಗೆ ಮಕ್ಕಳು ಬಂದರೆ ಹರಡುತ್ತದೆಯೇ? ಎಂದು ಪಾಲಕರು ಪ್ರಶ್ನಿಸಿದರು.

ಲಾಕಡೌನ್‌ದಿಂದ ಅರ್ಧ ಜೀವನ ಹಾಳಾಗಿದೆ. ಇನ್ನು ಮಕ್ಕಳ ಭವಿಷ್ಯವನ್ನು ಕತ್ತಲೆಯತ್ತ ದೂಡಬೇಡಿ. ನಾವುವೈಜ್ಞಾನಿಕ ಕಾರಣಕೊಟ್ಟು ಕೇಳುತ್ತಿದ್ದೇವೆ. ದಯವಿಟ್ಟುಕ್ಲಾಸ್‌ಗಳನ್ನು ಆರಂಬಿಸಿ. 1ರಿಂದ 5ನೇ ತರಗತಿವರೆಗೆಶಾಲೆ ಆರಂಭಿಸದೇ ಹೋದರೆ ಈ ಹೋರಾಟ ಕೇವಲತೆಲಸಂಗ ಹೋಬಳಿಗೆ ಮಾತ್ರ ಸೀಮಿತವಾಗಿರದೆರಾಜ್ಯಮಟ್ಟದಲ್ಲಿ ಹೋರಾಟ ಆರಂಭಿಸಲಾಗುವುದು.ಅಲ್ಲದೆ ಸಾಮಾಜಿಕ ಜಾಲತಾಣಗಳನ್ನು ಬಳಸಿ ಸರಕಾರದವಿರುದ್ಧ ಮಕ್ಕಳ ಭವಿಷ್ಯ ಉಳಿಸಿ ಅಂದೋಲನ ನಡೆಸಿಸಮರ ಸಾರುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಡಾ| ಎಸ್‌.ಐ. ಇಂಚಗೇರಿ, ಅರುಣ ಚವ್ಹಾಣ, ಶಿವಯೋಗಿ ಹತ್ತಿ,ಅಮಸಿದ್ದ ಟೋಪಣಗೋಳ, ಸಿದ್ದು ಕೋಡ್ನಿ, ಮಾಯಪ್ಪಸಾವಳಗಿ, ಶರಣು ಹತ್ತಿ, ದುಂಡಪ್ಪ ಜಾಬಗೊಂಡ,ಮಲ್ಲಪ್ಪ ವಮನಸ್‌, ಪ್ರಭು ಕುಂಬಾರ, ಸಚೀನಪಾಟೀಲ, ಮಹೇಶ ಹನಗಂಡಿ, ಪ್ರಮೋದ ಖ್ಯಾಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next