ದೋಟಿಹಾಳ: ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯೋ ಇಲ್ಲವೋ ಎಂದು ಮಾತ್ರ ಗಮನ ಹರಿಸುವುದಿಲ್ಲ. ಇದಕೊಂದು ತಾಜಾ ಉದಾಹರಣೆ ಇಲ್ಲಿದೆ. ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಎರಡ್ಮೂರು ವರ್ಷಗಳೇ ಕಳೆದಿದೆ. ಆದರೆ ಇದುವರೆಗೂ ಉದ್ಘಾಟನೆಯಾಗಿಲ್ಲ.
Advertisement
ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಕಿಡದೂರು ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಗೊಂಡು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಬೇಕಾಗಿದ್ದ ಕಟ್ಟಡ ಅಧಿಕಾರಿಗಳು-ಗುತ್ತಿಗೆದಾರರ ಸಮನ್ವಯ ಕೊರತೆಯಿಂದ ಅನಾಥವಾಗಿದೆ. ಸದ್ಯ ಕಟ್ಟಡದ ಸುತ್ತಮುತ್ತಲು ಜಾಲಿ ಮುಳ್ಳು ಕಂಠಿ ಬೆಳೆದು ನಿಂತಿದೆ. ಸರಕಾರದ ಲಕ್ಷಾಂತರ ರೂಪಾಯಿ ಯೋಜನೆ ಹಾದಿ ತಪ್ಪುತ್ತಿದೆ.
Related Articles
Advertisement
2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಅಂಗನವಾಡಿ ಕಟ್ಟಡಕ್ಕೆ 8 ಲಕ್ಷ ರೂ. ನೀಡಲಾಗಿತ್ತು. ಒಂದು ವೇಳೆ 14 ಲಕ್ಷ ರೂ.ಗೆ ಅಂಗನವಾಡಿ ಕಟ್ಟಡ ಕಾಮನ್ ವರ್ಕ್ ಶೆಡ್ ನಿರ್ಮಾಣ ಅನುಮೋದನೆ ನೀಡಿದ್ದರೆ ಕಿಲ್ಲಾರಹಟ್ಟಿ ಗ್ರಾಪಂ ಅಂದಿನ ಕ್ರಿಯಾಯೋಜನೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.ಪ್ರಕಾಶ, ಜಿಪಂ ಯೋಜನಾ ನಿರ್ದೇಶಕ, ಕೊಪ್ಪಳ ಕಿಡದೂರು ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಅನುದಾನ ನೀಡದ ಕಾರಣ
ಗುತ್ತಿಗೆದಾರರು ಕಟ್ಟಡವನ್ನು ಇನ್ನೂ ಹಸ್ತಾಂತರ ಮಾಡಿಲ್ಲ. ಹೀಗಾಗಿ ಹೊಸ ಕಟ್ಟಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗದೆ ಹಾಳುಗುತ್ತಿದೆ.
*ಯಲ್ಲಮ್ಮ ಹಂಡಿ, ಸಿಡಿಪಿಒ, ಕುಷ್ಟಗಿ ಕಿಡದೂರು ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಗೊಂಡು 2-3 ವರ್ಷ ಕಳೆದಿದ್ದೆ. ಇದರ ಬಗ್ಗೆ ಈಗಾಗಲೇ
ಚರ್ಚೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
*ಪಂಪಾಪತಿ ಹಿರೇಮಠ,
ತಾಪಂ ಇಒ, ಕುಷ್ಟಗಿ *ಮಲ್ಲಿಕಾರ್ಜುನ ಮದಿಕೇರಿ