Advertisement

ರಸ್ತೆ ತಡೆಗೋಡೆ ತೆರವಿಗೆ ಒತ್ತಾಯ

02:20 PM Dec 19, 2021 | Team Udayavani |

ಹೊಳೆನರಸೀಪುರ: ಪಟ್ಟಣದ ಹೃದಯ ಭಾಗ ತಾಲೂಕು ಕಚೇರಿಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಗೆ ತಡೆಗೋಡೆ ನಿರ್ಮಿಸದ್ದು ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎನ್‌. ಆರ್‌.ಮುತ್ತೂರಾಜ್‌ ತಾಲೂಕು ಆಡಳಿತವನ್ನು ಆಗ್ರಹಪಡಿಸಿದರು.

Advertisement

ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಪುರಸಭೆ ನಾಮನಿರ್ದೇಶಿತಸದಸ್ಯ ಪ್ರಸನ್ನ ಮತ್ತು ಭಾರತೀಯ ಕಿಸಾಸ್‌ ಸಂಘದ ಜಿಲ್ಲಾಧ್ಯಕ್ಷ ಅಂಕನಹಳ್ಳಿ ಕಾಳೇಗೌಡ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ತಾಲೂಕು ಕಚೇರಿಯ ಪೂರ್ವ ರಸ್ತೆಯನ್ನು ಮುಚ್ಚಿದ್ದು ಇದರಿಂದ ಹತ್ತಾರುವರ್ಷಗಳಿಂದ ಇದ್ದ ರಸ್ತೆಗೆ ತಡೆಗೋಡೆ ನಿರ್ಮಿಸಿ ಸಾರ್ವಜನಿಕರು ಮತ್ತು ವಾಹನಸಂಚಾರಕ್ಕೆ ಅನ್ಯಾಯ ಎಸಗಿದ್ದಾರೆ ಎಂದರು.

ನೂರಾರು ವರ್ಷಗಳಿಂದ ಇದ್ದ ರಸ್ತೆಯನ್ನು ತಡೆಗೋಡೆ ನಿರ್ಮಿಸಿ ಮುಚ್ಚಿರುವುದದಲ್ಲದೆ,ತಡೆಗೋಡೆ ಪಕ್ಕದಲ್ಲಿ ಸಮುಧಾಯ ಭವನನಿರ್ಮಿಸಿದ್ದಾರೆ. ಈ ಭವನ ನಿರ್ಮಾಣದ ವೇಳೆಪುರಸಭೆಯಿಂದ ಪರವಾನಗಿ ಪಡೆದಿದ್ದು,ಪಕ್ಕದಲ್ಲಿ ನಿವೇಶನವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದಾರೆ. ಇದರಿಂದ ಅವಾಂತರ ಸೃಷ್ಟಿಯಾಗಿದೆ ಎಂದರು.

ಈ ಸಮುದಾಯ ಭವನ ನಿರ್ಮಾಣದ ಆರಂಭದಲ್ಲಿ ಅಂದಿನ ತಹಶೀಲ್ದಾರ್‌ ಕೆ.ಆರ್‌. ಶ್ರೀನಿವಾಸ್‌ ತಮ್ಮ ಸಮ್ಮತಿ ಇಲ್ಲವೆಂದು ಮೌಖೀಕವಾಗಿ ತಿಳಿಸಿದ್ದರು. ಯಾವುದೇಸೂಚನೆಯನ್ನು ಪರಿಗಣಿಸದೆ ಭವನ. ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದು, ಶೀಘ್ರ ತೆರವಿಗೆ ಒತ್ತಾಯಿಸಿದರು.

ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಅಂಕನಹಳ್ಳಿ ಕಾಳೇಗೌಡ ಮಾತನಾಡಿ, ತಾಲೂಕು ಕಚೇರಿಗೆ ಸಾರ್ವಜನಿಕರ ಓಡಾಟಕ್ಕೆ ಇದ್ದ ರಸ್ತೆಗೆತಡೆಗೋಡೆ ನಿರ್ಮಿಸಿರುವುದನ್ನು ಜಿಲ್ಲಾಧಿಕಾರಿಗಳು ತುರ್ತಾಗಿ ತೆರವುಗೊಳಿಸುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು. ಇದನ್ನು ಹೀಗೆ ಬಿಟ್ಟರೆ ಸಾರ್ವಜನಿಕರೇ ತೆರವುಗೊಳಿಸುತ್ತಾರೆ ಎಂದರು. ನಮ್ಮಆರೋಪಕ್ಕೆ ಸಾಕಷ್ಟು ದಾಖಲೆಗಳು ಇದ್ದು ಅವುಗಳನ್ನು ಈಗಾಗಲೆ ತಮ್ಮ ಮುಂದೆ ಇರಿಸಿದ್ದೇವೆ ಎಂದರು.

Advertisement

ಪಟ್ಟಣದ ಪುರಸಭೆಗೆ ನಾಮ ನಿರ್ದೇಶಕರಾಗಿ ರಾಜ್ಯ ಸರ್ಕಾರ ಐವರು ಬಿಜೆಪಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ. ನಮ್ಮ ವೇಳೆಯಲ್ಲಿಪುರಸಭೆಯಲ್ಲಿ ಯಾವೊಂದು ಅಡ್ಡ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲಎಂಬುದನ್ನು ಅರಿತು ಪುರಸಭೆ ಮುಖ್ಯಾ ಕಾರಿಗಳು ಸೇರಿದಂತೆ ಈ ಸಮುದಾಯಭವನ( ಗಣಪತಿ ಪೆಂಡಾಲ್‌) ಮತ್ತು ತಡೆಗೋಡೆಗೆ ಹಳೇ ದಿನಾಂಕದಲ್ಲಿ ತಮಗೆ ಬೇಕಾದ ರೀತಿ ನಿರ್ಣಯವನ್ನು ಕೈಗೊಂಡಿದ್ದಾರೆ. -ಬಿಜೆಪಿ ಪ್ರಸನ್ನ, ಪಪಂ ನಿರ್ದೇಶಿತ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next