ಹಿರಿಯೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ ಒತ್ತಾಯಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿಸುಮಾರು 13 ಕಿಮೀ ಭೂ ಸ್ವಾ ಧೀನ ಪ್ರಕ್ರಿಯೆ ಅಜ್ಜಂಪುರ ಸಮೀಪ ಬಾಕಿ ಉಳಿದಿದೆ. ಜಿಲ್ಲೆಯಜನಪ್ರತಿನಿ ಧಿಗಳು ಈ ಬಗ್ಗೆ ಕ್ರಮ ವಹಿಸುವಂತೆ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ ಮಾತನಾಡಿ, ಶ್ರೀ ನಂಜಾವಧೂತಸ್ವಾಮೀಜಿಯವರ ನೇತೃತ್ವದಲ್ಲಿ ತಾಲೂಕು ರೈತ ಸಂಘ ಹಾಗೂ ಧರ್ಮಪುರ ಹೋಬಳಿಯಜನಪರ ಸಂಘಟನೆಗಳು ನಡೆಸಿದ ಹೋರಾಟದಫಲವಾಗಿ ಧರ್ಮಪುರ ಕರೆ ಭದ್ರಾ ಮೇಲ್ದಂಡೆವ್ಯಾಪ್ತಿಗೆ ಸೇರಿದೆ. ಧರ್ಮಪುರ ಕರೆಗೆ ಫಿಡರ್ ಚಾನಲ್ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಮುಖಾಂತರ ಶೀಘ್ರ ನೀರು ಹರಿಸುವಂತೆ ಆಗ್ರಹಿಸಿದರು.
ತಾಲೂಕು ಕಾರ್ಯಾಧ್ಯಕ್ಷ ಶಿವಕುಮಾರ್ ಬ್ಯಾಡರಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಅಡಿಕೆ, ದಾಳಿಂಬೆ, ಇತರೆ ಬೆಳೆಗಳಿಗೆ ರೈತರು ವಿಮೆ ಹಣ ಪಾವತಿಸಿದ್ದಾರೆ. ಕೂಡಲೇ ರೈತರ ಖಾತೆಗೆ ವಿಮೆ ಹಣವನ್ನು ನೀಡಬೇಕು ಹಾಗೂ ಸರ್ಕಾರ ರೈತರಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಹಾಲಿನ ದರವನ್ನು ಸರ್ಕಾರ ತಕ್ಷಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ ಮಾತನಾಡಿ,ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಈರುಳ್ಳಿ, ಶೇಂಗಾ, ತರಕಾರಿ, ಹೂವು ಇತರೆ ಬೆಳೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಘೋಷಿಸಬೇಕು. ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರಿಗೆ ಆದಷ್ಟು ಬೇಗ ಹಕ್ಕುಪತ್ರ ವಿತರಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಮುಖಂಡರುಗಳಾದ ಗೋವಿಂದರಾಜು, ಎಂ.ಆರ್. ಪುಟ್ಟಸ್ವಾಮಿ, ಎಂ. ಲಕ್ಷ್ಮೀಕಾಂತ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನಾಗರಾಜಪ್ಪ,ಬಿ.ಡಿ. ಶ್ರೀನಿವಾಸ್, ಗೌಸ್ ಸಾಬ್, ತಾಲೂಕು ಮುಖಂಡರಾದ ದಸ್ತಗೀರ್ ಸಾಬ್, ಚೇತನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಿ. ಕಲ್ಪನಾ, ರತ್ನಮ್ಮ, ದ್ರಾûಾಯಣಮ್ಮ, ಮುಕುಂದಪ್ಪ, ಜೆ.ಎಚ್. ಗೌಡ, ಎಚ್.ಎನ್. ಮೂರ್ತಪ್ಪ,ಸೋಮಸುಂದರ್, ನಾಗೇಂದ್ರಪ್ಪ, ರಂಗಸ್ವಾಮಿ, ತಿಪ್ಪೇಸ್ವಾಮಿ, ಗಂಗಾಧರಪ್ಪ, ನರಸಿಂಹಮೂರ್ತಿ, ಓಬಣ್ಣ, ಕೊಲ್ಲಾಪುರಿ ರೆಡ್ಡಿ, ರುದ್ರಪ್ಪ, ನಾಗರಾಜ್, ಶಿವಲಿಂಗ, ಅಂಗುರಾಜ್, ಸುಬ್ರಮಣಿ, ಮುಕುಂದಪ್ಪ, ಚಂದ್ರಶೇಖರ್, ಶಾರದಮ್ಮ, ಪುಟ್ಟಮ್ಮ, ಮಹದೇವಮ್ಮ, ಇಂದಿರಮ್ಮ, ರಂಗವ್ವ ಇತರರು ಭಾಗವಹಿಸಿದ್ದರು.