ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ, ಆದರೆ ಸರ್ಕಾರಿ ಪಟ್ಟಿಯಲ್ಲಿ ಇಲ್ಲದ ಯೋಧರನ್ನೂ ಸರ್ಕಾರ ಗಮನಿಸಬೇಕಿದೆ.
ಅಂತಹ ಯೋಧರಲ್ಲಿ ಆಸ್ಪತ್ರೆಗಳ ಕಚೇರಿ ಸಿಬ್ಬಂದಿ, ಸಹಾಯಕ ಸಿಬ್ಬಂದಿಗಳು, ವಾಹನ ಚಾಲಕರೂ ಇದ್ದಾರೆ. ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ಚಿತಾಗಾರದ ಸಿಬ್ಬಂದಿಯೂ ಇದ್ದಾರೆ. ಅವರೆಲ್ಲರೂ ತಮಗೂ, ” ಕೋವಿಡ್ ಯೋಧರಿಗೆ ಸಿಗಬೇಕಾದ ಸವಲತ್ತುಗಳು ಸಿಗಬೇಕೆಂದು ಒತ್ತಾಯಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ನೌಕರರನ್ನು ಕೋವಿಡ್ ವಿಮಾ ಸೌಲಭ್ಯ ನೀಡಬೇಕು ಎಂದು ಇಲಾಖೆ ನೌಕರರ ಸಂಘ ಒತ್ತಾಯಿಸಿದೆ. ಕೋವಿಡ್ ವಾರಿಯರ್‌ಗಳು ಎಂದರೆ ಕೇವಲ ವೈದ್ಯರು, ನರ್ಸಿಂಗ್ ಸಿಬ್ಬಂದಿ ಎಂಬ ಕಲ್ಪನೆ ಇದೆ. ಆದರೆ, ಆಸ್ಪತ್ರೆಗಳ ಕಚೇರಿ ಸಿಬ್ಬಂದಿ, ಸಹಾಯಕ ಸಿಬ್ಬಂದಿಗಳು, ವಾಹನ ಚಾಲಕರು ಸೇರಿದಂತೆ ಅನೇಕರು ಕೋವಿಡ್ ತಡೆಗಟ್ಟಿವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹೀಗಾಗಿ, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ನೌಕರರಿಗೂ ವಿಮಾ ಸೌಲಭ್ಯ ನೀಡಬೇಕು ಎಂದು ಸಂಘದ ಅಧ್ಯಕ್ಷ ಪುಟ್ಟ ರಾಜು ಆಗ್ರಹಿಸಿದ್ದಾರೆ.
ಮತ್ತೂಂದೆಡೆ ಆರೋಗ್ಯ ಇಲಾಖೆಯಲ್ಲಿ ಆರು ಸಾವಿರಕ್ಕೂ ಅಧಿಕ ಹೊಗುತ್ತಿಗೆ ನೌಕರರು ಇದ್ದು ಇವರು ಆಸ್ಪತ್ರೆ ಒಳಗೆ ರೋಗಿಗಳ ಆರೈಕೆಯಲ್ಲಿ/ ಹೊರಗೆಕಚೇರಿ ಕೆಲಸ, ಸಮೀಕ್ಷೆಕಾರ್ಯದಲ್ಲಿ ತೊಡಗಿದ್ದಾರೆ.ಇವರೆಲ್ಲರನ್ನೂ ವಿಮಾ ಸೌಲಭ್ಯಕ್ಕೆ ತರಲಾಗಿದೆಯೇ ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಗುತ್ತಿಗೆ/ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಚ್.ವೈ. ವಿಶ್ವಾರಾಧ್ಯ ಒತ್ತಾಯಿಸಿದ್ದಾರೆ.
ವಿದ್ಯುತ್ ಚಿತಾಗಾರ , ರುದ್ರಭೂಮಿ ಸಿಬ್ಬಂದಿಗೆ ರಕ್ಷಣೆ ನೀಡಿ :
ಬೆಂಗಳೂರಿನಲ್ಲಿ ಕೋವಿಡ್ ಹಾಗೂ ಕೊರೊನೇತರ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ವಿದ್ಯುತ್ ಚಿತಾಗಾರದ ಸಿಬ್ಬಂದಿ ಹಾಗೂ ರುದ್ರಭೂಮಿಯ ಸಿಬ್ಬಂದಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲ ಎಂದು ರುದ್ರಭೂಮಿ ನೌಕರರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಡಿ ಚಂದ್ರು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ300ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇದರಲ್ಲಿ148 ಜನರನ್ನು ಮಾತ್ರ ತಾತ್ಕಾಲಿಕ ಗುತ್ತಿಗೆ ನೌಕರರನ್ನಾಗಿ ಪಾಲಿಕೆ ನೇಮಕ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ನಮಗೆ ಕೋವಿಡ್ ಟೆಸ್ಟ್ ಮಾಡಿಸಿಲ್ಲ . ನಮ್ಮನ್ನುಕಾಯಂ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು. ನಿತ್ಯ12ರಿಂದ14 ಗಂಟೆಕರ್ತವ್ಯ ನಿರ್ವಹಿಸುತ್ತಿದ್ದು, ಕರ್ತವ್ಯದ ಅವಧಿಯನ್ನು 8 ಗಂಟೆಗೆ ಸೀಮಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ