Advertisement

ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಒತ್ತಾಯ

05:37 PM Sep 03, 2022 | Team Udayavani |

ತಿಪಟೂರು: ತಿಪಟೂರು ಪೊಲೀಸ್‌ ಉಪವಿಭಾಗ ದಲ್ಲಿ ಮನೆಗಳ್ಳತನ, ಕ್ರೆçಂಗಳು, ಅಕ್ರಮ ಮದ್ಯ ಮಾರಾಟ, ಮಟ್ಕಾ, ಇಸ್ಪೀಟ್‌ ದಂಧೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳು ಎಡಬಿಡದೆ ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ತಾಳಿದ್ದು ಕೂಡಲೇ ಕಡಿವಾಣ ಹಾಕಬೇಕೆಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಡಿವೈಎಸ್‌ಪಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದರು.

Advertisement

ನಗರದ ಡಿವೈಎಸ್‌ಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಪೊಲೀಸ್‌ ಇಲಾಖೆಯ ವಿರುದ್ಧ ಸಾರ್ವಜನಿಕರ ಹಲವು ಸಮಸ್ಯೆಗಳ ಬಗ್ಗೆ ಡಿವೈಎಸ್‌ಪಿ ಸಿದ್ಧಾರ್ಥ ಗೋಯಲ್‌ ಬಳಿ ಮಾಧ್ಯಮದವರ ಎದುರು ಚರ್ಚಿಸಿದ ಅವರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ತಾಲೂಕುಗಳಲ್ಲಿ ಸಾಕಷ್ಟು ಕ್ರೈಂಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಚಿಕ್ಕ ವಯಸ್ಸಿನ ಮಕ್ಕಳೇ ಕುಡಿತ, ಮಟ್ಕಾದ ದಾಸರಾಗುತ್ತಿದ್ದಾರೆ. ಪೋಲಿ ಪುಂಡರ ಕಾಟ ಹೆಚ್ಚಾಗಿದ್ದು, ವೀಲಿಂಗ್‌ ಮಾಡುತ್ತಾ ರಸ್ತೆಯುದ್ದಕ್ಕೂ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿರುತ್ತಾರೆ. ಇಷ್ಟಾದರೂ ಪೊಲೀಸ್‌ ಇಲಾಖೆ ಸೂಕ್ತ ಕ್ರಮವಹಿಸಿ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ. ಸಾರ್ವಜನಿಕರು ಇಂತಹ ಹತ್ತಾರು ಸಮಸ್ಯೆಗಳಿಂದ ರೋಸಿಹೋಗಿದ್ದು ಕೂಡಲೇ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಪ್ರತಿ ತಿಂಗಳು ಸಭೆ ನಡೆಸಿ: ಮಾಜಿ ಶಾಸಕ ಕೆ. ಷಡಕ್ಷರಿ ಮಾತನಾಡಿ, ಪೊಲೀಸ್‌ ಬೀಟ್‌ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಕಳ್ಳತನ, ಅಕ್ರಮ ಪ್ರಕರಣ ಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಅಪ್ರಾಪ್ತರು ಬೈಕ್‌ ವೀಲಿಂಗ್‌ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಮಹಿಳಾ ಪೊಲೀಸ್‌ ಠಾಣೆಯನ್ನು ನಗರದಲ್ಲಿ ಸ್ಥಾಪಿಸಬೇಕು. ಪ್ರತಿ ತಿಂಗಳು ಇಲಾಖೆಯಿಂದ ಸಾರ್ವಜನಿಕ ಸಭೆ ನಡೆಸಬೇಕೆಂದು ತಿಳಿಸಿದರು.

ಡಿವೈಎಸ್‌ಪಿ ಸಿದ್ಧಾರ್ಥ್ ಗೋಯಲ್‌ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಗರದಲ್ಲಿ ವೀಲಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ರಂಗಾಪುರ, ಬಿದರೆಗುಡಿ, ರಾಷ್ಟ್ರೀಯ ಹೆದ್ದಾರಿ ಹೀಗೆ ಐದು ಕಡೆ ಸ್ಥಳಗಳನ್ನು ಗುರ್ತಿಸಿ ಎಚ್ಚರಿಕೆ ಕೊಟ್ಟಿದ್ದೇವೆ. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ನಿಜ. ಈ ಬಗ್ಗೆ 21 ಪ್ರಕರಣಗಳನ್ನು ದಾಖಲಿಸಿ ಎಚ್ಚರಿಸಲಾಗಿದ್ದು ಇವರಿಗೆ ಮದ್ಯ ಸರಬರಾಜು ಮಾಡುವ ಮೂರು ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗಿದೆ ಎಂದರು.

ನಾವು ಪ್ರಾಮಾಣಿಕತೆಯಿಂದ ಕಾನೂನಿನಡಿ ಯಲ್ಲಿ ಕೆಲಸ ಮಾಡುತ್ತಿದ್ದು, ಅಕ್ರಮಗಳಿಗೆ ಕಡಿ ವಾಣ ಹಾಕುತ್ತೇವೆ ಎಂದರು.

Advertisement

ಹುಳಿಯಾರು ಜಿ. ಪಂ.ಮಾಜಿ ಸದಸ್ಯ ಸಿದ್ದರಾಮಯ್ಯ, ಚಿಕ್ಕನಾಯಕನ ಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ತಾ.ಅಧ್ಯಕ್ಷ ಕಾಂತರಾಜು, ತಾಪಂ ಮಾಜಿ ಅಧ್ಯಕ್ಷ ಸುರೇಶ್‌, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್‌, ಅಲ್ಪಸಂಖ್ಯಾತ ಘಟಕದ ತಾ.ಅಧ್ಯಕ್ಷ ಸೈಫ‌ುಲ್ಲಾ, ಚಿ.ನಾ.ಹಳ್ಳಿ ಕೃಷ್ಣಮೂರ್ತಿ, ಬಜಗೂರು ಮಂಜುನಾಥ್‌, ಸುಜಿತ್‌ಭೂಷಣ್‌, ಲೋಕನಾಥಸಿಂಗ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next