Advertisement

ಖಾತ್ರಿ ಭ್ರಷ್ಟಾಚಾರ ತಡೆಗೆ ಆಗ್ರಹ

08:39 AM Jun 28, 2020 | Suhan S |

ಜೇವರ್ಗಿ: ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಿ, ನಿಜವಾಗಿ ದುಡಿಯುವ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪಟ್ಟಣದ ತಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, ಮಳೆ ಬಂತು ಎಂದು ಉದ್ಯೋಗ ಖಾತ್ರಿ ಕೆಲಸ ಕೊಡುವುದನ್ನು ನಿರಾಕರಿಸಬಾರದು. ನಿಜವಾಗಿ ದುಡಿಯುವ ಕೃಷಿ ಕೂಲಿಕಾರರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಕೂಲಿಕಾರರಿಗೆ ಕೂಲಿ ಹಣ ಜಮೆ ಆಗುತ್ತಿಲ್ಲ. ಈ ಕುರಿತು ಸೂಕ್ತ ದಾಖಲಾತಿಗಳೊಂದಿಗೆ ತಾಲೂಕು ಪಂಚಾಯತಿ ಕಚೇರಿಯ ಕಂಪ್ಯೂಟರ್‌ ಆಪರೇಟರ್‌ಗಳನ್ನು ಹಲವಾರು ಬಾರಿ ಭೇಟಿ ಮಾಡಿದರೂ ಪ್ರಯೋಜನ ಆಗಿಲ್ಲ. ಕಾರಣ ತಕ್ಷಣ ಈ ಸಮಸ್ಯೆ ಸರಿಪಡಿಸಿ, ಕೂಲಿಕಾರರ ಬ್ಯಾಂಕ್‌ಗಳ ಖಾತೆಗೆ ಹಣ ಜಮಾ ಮಾಡಬೇಕು. ಎರಡೂ¾ರು ತಿಂಗಳು ಗತಿಸಿದರೂ ಹೊಸ ಜಾಬ್‌ಕಾರ್ಡ್‌ಗಳು ಆಗುತ್ತಿಲ್ಲ ಎಂದು ಹೇಳಿದರು.

ನಂತರ ತಾ.ಪಂ ಇಒ ವಿಲಾಸರಾಜ ಅವರಿಗೆ ಮನವಿ ಸಲ್ಲಿಸಲಾಯಿತು. ಹಿರಿಯ ರೈತ ಮುಖಂಡ ವೆಂಕೋಬರಾವ್‌ ವಾಗಣಗೇರಿ, ಸಂಘದ ಕಾರ್ಯದರ್ಶಿ ಪರಶುರಾಮ ಬಡಿಗೇರ, ಸಿದ್ಧರಾಮ ಹರವಾಳ, ಬಸವರಾಜ ಪೂಜಾರಿ, ನಾಗಪ್ಪ ಕೊಡಮನಹಳ್ಳಿ, ಬಸಪ್ಪ ನಡುವಿನಕೇರಿ, ಶ್ರೀನಾಥ ಮಡಿವಾಳಕರ್‌, ಪೀರಪ್ಪ, ಶ್ರೀನಾಥ, ವಿಠಲ ಹಟ್ಟಿ, ಸಿದ್ಧರಾಮ ಹೂಗಾರ, ಮಲಕಪ್ಪ ಮ್ಯಾಗೇರಿ, ಸಕ್ರೆಪ್ಪ ದಾಸರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next